ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ತುಳು ಲಿಪಿಯ ದಾರಿ ಸೂಚಕದ ನಾಮಫಲಕ ಉದ್ಘಾಟನೆ

0

ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ತುಳು ಲಿಪಿಯ ದಾರಿ ಸೂಚಕದ ನಾಮಫಲಕ ಉದ್ಘಾಟನೆ

ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರಂಡ್ಸ್ ಕ್ಲಬ್‍ನ ತುಳು ಲಿಪಿಯ ದಾರಿ ಸೂಚಕದ ನಾಮಫಲಕ ಸೋಮವಾರ ಉದ್ಘಾಟನೆಗೊಂಡಿತು. ತುಳುನಾಡು ಎಂದೇ ಕರೆಯಲ್ಪಡುವ ಕರ್ನಾಟಕದ ಕರಾವಳಿಯ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಂದಳಿಕೆ ಅಬ್ಬನಡ್ಕ ಊರೊಂದರಲ್ಲಿನ ಯುವಕರ ತಂಡವೊಂದು ತಮ್ಮ ಯುವಕ ಮಂಡಲದ ಹೆಸರನ್ನು ತುಳು ಲಿಪಿಯಲ್ಲಿ ಬರೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಪಂಚ ದ್ರಾವಿಡ ಭಾಷೆಯಲ್ಲಿ ಒಂದಾದ ತುಳು ಭಾಷೆಯ ಮೇಲೆ ತುಳುವರು ಅಭಿಮಾನ ಇರಿಸಿರುವುದಕ್ಕೆ ಸಾಕ್ಷಿಯಾಗಿ ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಹೆಸರನ್ನು ತುಳು ಲಿಪಿಯಲ್ಲಿ ಬರೆಯುವ ಮೂಲಕ ಶ್ಲಾಘನೀಯ ಕಾರ್ಯವನ್ನು ಮಾಡಿದೆ. ಈಗಾಗಲೇ ಈ ಸಂಸ್ಥೆಯ ತುಳು ಭಾಷೆಯ ಮೇಲಿನ ಅಭಿಮಾನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಪ್ರಶಂಸೆಗೆ ಪಾತ್ರವಾಗಿದೆ.
ತುಳು ಭಾಷೆಗೆ ಮಾನ್ಯತೆ ಸಿಗುವ ನಿಟ್ಟಿನಲ್ಲಿ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ತುಳು ಲಿಪಿಯ ದಾರಿ ಸೂಚಕ ಮಾರ್ಗಸೂಚಿ ನಾಮಫಲಕವನ್ನು ತುಳು ಲಿಪಿಯಲ್ಲಿ ಬರೆದು ಎಲ್ಲರಿಗೂ ಮಾದರಿಯಾಗಿದೆ ಎಂದು ಮಂಗಳೂರು ಬಿರುವೆರ್ ಕುಡ್ಲದ ಸಂಘಟನಾ ಕಾರ್ಯದರ್ಶಿ ನಾವೂರು ಉದಯ ಬಂಗೇರ ತುಳು ಲಿಪಿಯ ದಾರಿ ಸೂಚಕ ನಾಮಫಲಕ ಉದ್ಘಾಟಿಸಿ ಮಾತನಾಡಿದರು.
ತುಳು ಎನ್ನುವುದು ಕೇವಲ ಭಾಷೆಯಲ್ಲ, ಅದು ತುಳುನಾಡಿನ ಸಂಸ್ಕೃತಿಯ ಪ್ರತಿರೂಪ ಎಂದು ಬೆಳ್ಮಣ್ಣು ಜೇಸಿಐನ ಅಧ್ಯಕ್ಷ ಇಂದಾರು ಸತ್ಯನಾರಾಯಣ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತುಗಳನ್ನಾಡಿದರು.
ತುಳು ಭಾಷೆಯನ್ನು ಆಂಗ್ಲ ಮಾಧ್ಯಮದ ವ್ಯಾಮೋಹದಿಂದ ಜನ ನಮ್ಮ ಮಾತೃ ಭಾಷೆಯನ್ನು ಮರೆಯುತ್ತಿದ್ದಾರೆ. ತುಳು ಭಾಷೆಯ ಬಗ್ಗೆ ಅಭಿಮಾನ ಇದ್ದರೆ ತುಳು ಭಾಷೆ ಉಳಿಸಿ ಬೆಳೆಸುವ ಕಾರ್ಯ ಆಗುತ್ತದೆ. ಪ್ರತಿ ಗ್ರಾಮದಲ್ಲೂ ತುಳು ಭಾಷೆಯ ಅಭಿಮಾನ ಪ್ರಾರಂಭವಾಗಬೇಕು. ಈ ನಿಟ್ಟಿನಲ್ಲಿ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಸಂಸ್ಥೆಯ ತುಳು ಭಾಷೆಯ ಮೇಲಿನ ಅಭಿಮಾನ ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಅಬ್ಬನಡ್ಕ ಲಿಯೋ ಕ್ಲಬ್‍ನ ಅಧ್ಯಕ್ಷ ನಂದಳಿಕೆ ಪ್ರಶಾಂತ್ ಪೂಜಾರಿ ಮುಖ್ಯ ಅತಿಥಿಯಾಗಿ ಭಾಗಹಿಸಿ ಮಾತುಗಳನ್ನಾಡಿದರು.
ತುಳು ಸಾಹಿತ್ಯ, ಸಂಸ್ಕಾರ ಹೊಂದಿರುವ ಸಮೃದ್ಧ ಭಾಷೆ, ಪ್ರತಿಯೊಬ್ಬರು ಕನಿಷ್ಠ ತಮ್ಮ ಹೆಸರನ್ನು ತುಳು ಲಿಪಿಯಲ್ಲಿ ಬರೆಯಲು ಕಲಿಯಬೇಕು. ತುಳುವಿಗೆ ವಿಶೇಷ ಸ್ಥಾನಮಾನ ದೊರಕಿಸಿಕೊಡುವಲ್ಲಿ ಇಂತಹ ಅಭಿಮಾನಗಳು ಸಹಕಾರಿಯಾಗಲಿವೆ ಎಂದು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷ ಅಬ್ಬನಡ್ಕ ಸತೀಶ್ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ನಿಕಟ ಪೂರ್ವಾಧ್ಯಕ್ಷ ನಂದಳಿಕೆ ರಾಜೇಶ್ ಕೋಟ್ಯಾನ್, ಅಬ್ಬನಡ್ಕ ಭಜನಾ ಸಮಿತಿಯ ಅಧ್ಯಕ್ಷ ಬೋಳ ಮಂಜುನಾಥ ಆಚಾರ್ಯ, ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಬೋಳ ಉದಯ ಅಂಚನ್, ಅಬ್ಬನಡ್ಕ ಶ್ರೀ ವನದುರ್ಗಾ ಸ್ವ-ಸಹಾಯ ಸಂಘದ ಅಧ್ಯಕ್ಷೆ ಲಲಿತಾ ಆಚಾರ್ಯ, ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಜೊತೆ ಕಾರ್ಯದರ್ಶಿ ಕುಂಟಲಗುಂಡಿ ಸಂಧ್ಯಾ ಶೆಟ್ಟಿ, ಸದಸ್ಯರಾದ ಪುಷ್ಪ ಕುಲಾಲ್, ಪದ್ಮಶ್ರೀ ಪೂಜಾರಿ, ಆರತಿ ಕುಮಾರಿ ಮೊದಲಾದರಿದ್ದರು.

ವರದಿ: ಹರೀಶ್ ಸಚ್ಚೇರಿಪೇಟೆ

LEAVE A REPLY

Please enter your comment!
Please enter your name here