ನಂದಿನಿ ಬಡಾವಣೆ ವಾರ್ಡಿಗೆ ಔಷದಿ ಸಿಂಪಡಿಸಿದ ಬಿಬಿಎಂಪಿ ಸದಸ್ಯ ರಾಜೇಂದ್ರ ಕುಮಾರ್
ಬೆಂಗಳೂರು ಜು,21; ಮಹಾಲಕ್ಷ್ಮಿ ಬಡಾವಣೆ ವಿಧಾನಸಭ ಕ್ಷೇತ್ರದ ನಂದಿನಿ ಬಡಾವಣೆಯಲ್ಲಿ ಕಾರ್ಪೊರೇಟರ್ ರಾಜೇಂದ್ರ ಕುಮಾರರ ನೇತೃತ್ವದಲ್ಲಿ ಪ್ರಮುಖ ರಸ್ತೆಗಳಿಗೆ ಕೊರೊನ ವೈರಸ್ ನಿಯಂತ್ರಿಸಲು ಡಿಸಿನ್ಫೆಕ್ಟೆಡ್ ಸ್ಪ್ರೇಯರ್ ಮೂಲಕ ಔಷಧಿ ಸಿಂಪಡಿಸಲಾಯಿತು. ಕೊರೊನ ವೈರಸ್ ಕಟ್ಟಿಹಾಕಬೇಕೇಂಬ ಪಣತೊಟ್ಟು ಮುಂಜಾನೆಯಿಂದಲೇ ಸಿಬ್ಬಂದಿಗಳೊಂದಿಗೆ ಕಾರ್ಯ ಪ್ರವೃತ್ತರಾದ ಬಿಬಿಎಂಪಿ ಸದಸ್ಯ ರಾಜೇಂದ್ರ ಕುಮಾರರು ನಂದಿನಿ ಬಡಾವಣೆ, ಕಂಠೀರವ ನಗರ, ಕಂಠೀರವ ನಗರ 2ನೇ ಹಂತ, ರಾಮಕೃಷ್ಣ ನಗರ ಹಾಗೂ ವಾರ್ಡಿನ ಎಲ್ಲಾ ಮುಖ್ಯ ರಸ್ತೆಗಳಿಗೆ ಔಷದ ಸಿಂಪಡಿಸಿದರು.
ಕೊರೊನ ವೈರಸ್ ಸೋಂಕಿನ ಪತ್ತೆಗಾಗಿ ಸುಸಜ್ಜಿತ ಪ್ರಯೋಗಾಲಯಗಳನ್ನು ನಂದಿನಿ ಬಡಾವಣೆಯ ವಾರ್ಡಿನಲ್ಲಿ ಆರಂಭಿಸಿ, ರೋಗಿಗಳ ಪತ್ತೆಗೆ ಮತ್ತು ಕೊರೊನ ವೈರಸ್ ನಿಯಂತ್ರಣಕ್ಕೆ ಬೇಕಾದ ಸಕಲ ಸಿದ್ಧತೆಗಳನ್ನು ನಡೆಸುತ್ತ ಬಂದಿದ್ದಾರೆ. ಕೊರೊನ ವೈರಸ್ ತಡೆಗಟ್ಟಲು ಈಗಾಗಲೇ ಶ್ರಮವಹಿಸಿದ್ದಾರೆ.
ಕೊರೊನಾ ವಾರಿಯರ್ಸಾಗಿ ಸೇವೆ ಸಲ್ಲಿಸುತ್ತಿರುವ ರಾಜೇಂದ್ರ ಕುಮಾರರಿಗೆ ವಾರ್ಡಿನ ಜನತೆ ಅಭಿನಂದನೆ ಮತ್ತು ಕೃತಜ್ಞತೆಯ ಸಲ್ಲಿಸಿದರು.
ಔಷಧ ಸಿಂಪಡಿಸುವ ಕಾರ್ಯಕ್ಕೆ ಸ್ಥಳೀಯರಾದ ನಾರಾಯಣ್ ಸ್ವಾಮಿ. ಗಂಗಾಧರ್ ಮತ್ತಿತರರು ಭಾಗಿಯಾಗಿದ್ದರು.