ನಟಿ ರಾಗಿಣಿಗೂ ಬಿಜೆಪಿಗೂ ಯಾವ ಸಂಬಂಧವಿಲ್ಲ: ಸಚಿವ ಸಿಟಿ ರವಿ

0

ರಾಗಿಣಿಗೂ ನಮ್ಮ ಅಕ್ಷಕ್ಕೂ ಯಾವ ಸಂಬಂಧವಿಲ್ಲ ಎಂದು ಸಚಿವ ಸಿಟಿ ರವಿ ಹೇಳಿದ್ದಾರೆ. ಡ್ರಗ್ಸ್ ದಂಧೆಯ ಪ್ರಕರಣದಲಿ ಬಂಧಿತರಾಗಿರುವ ನಟಿ ರಾಗಿಣಿ ಈ ಹಿಂದೆ ಉಪ ಚುನಾವಣೆ ವೇಳೆ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದ ವೀಡಿಯೋಗಳು ಹರಿದಾಡಿದ ಬೆನ್ನಲ್ಲೇ ಸಚಿವರು ಈ ಹೇಳಿಕೆ ನೀಡಿದ್ದಾರೆ.

“ನಮ್ಮದು ಕಾಂಪ್ರಮೈಸ್, ಅಡ್ಜೆಸ್ಟ್ ಮೆಂಟ್ ಮಾಡಿಕೊಳ್ಳುವ ಪಕ್ಷವಲ್ಲ. ಯಾರಾದರೂ ತಪ್ಪು ಮಾಡಿದ್ದವರಿಗೆ ಶಿಕ್ಷೆ ಆಗಲೇಬೇಕು” ಸುದ್ದಿಗಾರರೊಡನೆ ಮಾತನಾಡಿದ ಸಚಿವರು ಹೇಳಿದ್ದಾರೆ.

“ರಾಗಿಣಿಯವರಿಗೆ ನೇರವಾಗಿ ಪಕ್ಷದ ಯಾವ ಜವಾಬ್ದಾರಿ ಇಲ್ಲ. ನಟಿಯಾಗಿ ಅವರಿಗೆ ಅವರದೇ ಸ್ಥಾನವಿದೆ.ಬಿಜೆಪಿಗೂ ಅವರಿಗೂ ಯಾವ ಸಂಬಂಧವಿಲ್ಲ.ಡ್ರಗ್ಸ್ ಪ್ರಕರಣ ತನಿಖೆ ನಡೆಯುತ್ತಿದೆ. ಮುಂದೆ ಅಗತ್ಯವಾದರೆ ಕೇಂದ್ರದ ಸಹಾಯ ಪಡೆಯಬಹುದು ಎಂದು ಸಚಿವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here