ನಟಿ ರಾಗಿಣಿ ವಿಚಾರಣಾಧೀನ ಕೈದಿ ನಂ.6604

0

ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಬಂಧಿಯಾಗಿರುವ ಕನ್ನಡದ ಖ್ಯಾತ ನಟಿ ರಾಗಿಣಿ ದ್ವಿವೇದಿ ಈಗ ವಿಚಾರಣಾಧೀನ ಕೈದಿ ನಂ.6604!

ಹೌದು, ಇದು ಸಿನಿಮಾ ಹೆಸರಲ್ಲ ಅಥವಾ ಹಿರೋಯಿನ್ ಮೇಲಿನ ಸಮವಸ್ತ್ರದ ಸಂಖ್ಯೆಯೂ ಅಲ್ಲ. ಬದಲಾಗಿ ನಿಜ ಜೀವನದಲ್ಲಿ ರಾಗಿಣಿ ದ್ವಿವೇದಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನೀಡಿರುವ ವಿಚಾರಣಾಧೀನ ಕೈದಿ ಸಂಖ್ಯೆ.

ಡ್ರಗ್ಸ್ ಪ್ರಕರಣದಲ್ಲಿ 6 ದಿನಗಳ ಕಾಲ ಸಿಸಿಬಿ ವಶದಲ್ಲಿದ್ದ ರಾಗಿಣಿ ಅವರನ್ನು ಮಹಿಳಾ ಸಾಂತ್ವಾನ ಕೇಂದ್ರದಲ್ಲಿ ವಿಚಾರಣೆ ನಡೆಸಲಾಗಿತ್ತು. ಆದರೆ ಸೋಮವಾರ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದರಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಲಾಯಿತು.

ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಪರಪ್ಪನ ಅಗ್ರಹಾರ ಜೈಲಿಗೆ ರಾಗಿಣಿ ಹಾಗೂ ಇತರೆ ಮೂವರನ್ನು ಒಂದೇ ವಾಹನದಲ್ಲಿ ಕರೆತರಲಾಗಿದ್ದು, ಈ ವೇಳೆ ರಾಗಿಣಿ ತಮ್ಮ ಹಾಗೂ ತಂದೆಯನ್ನು ತಬ್ಬಿಕೊಂಡು ಕಣ್ಣೀರಿಟ್ಟಿದ್ದಾರೆ.

ರಾಗಿಣಿ ಜೈಲು ಸೇರಿದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರದಲ್ಲಿ ಪೊಲೀಸ್ ಬಿಗಿಭದ್ರತೆ ಹೆಚ್ಚಿಸಲಾಗಿದೆ. ಜೈಲಿನಲ್ಲಿ ರಾಗಿಣಿ ಮೇಲೆ ಹಲ್ಲೆ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

LEAVE A REPLY

Please enter your comment!
Please enter your name here