ನಟಿ ರಾಗಿಣಿ ಸೇರಿದಂತೆ ಆರು ಮಂದಿಯನ್ನು 3 ದಿನ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ

0

ಬೆಂಗ ಳೂ ರು : ಡ್ರಗ್ಸ್​ ದಂಧೆಯ ಆರೋಪದಲ್ಲಿ ಸಿಸಿಬಿ ವಶದಲ್ಲಿರುವ ಸ್ಯಾಂಡಲ್​ವುಡ್ ನಟಿ ರಾಗಿಣಿ ಸೇರಿದಂತೆ 6 ಜನರನ್ನ ಮತ್ತೆ ಮೂರು ದಿನಗಳ ಕಾಲ ಪೊಲೀಸ್​​ ಕಸ್ಟಡಿಗೆ ನೀಡಿ ನೇ ಎಸಿಎಂಎಂ ನ್ಯಾಯಧೀಶರು ಆದೇಶ ಹೊರಡಿಸಿದ್ದಾರೆ.

ಸಿಸಿಬಿ ಪೊಲೀಸರು ವಿಡಿಯೋ ಕಾನ್ಫರೆನ್ಸ್ ಮೂಲಕ 1ನೇ ಎಸಿಎಂಎಂ ಕೋರ್ಟ್ ಜಡ್ಜ್ ಮುಂದೆ ಹಾಜರು ಪಡಿಸಿದ್ದರು. ಸ್ಯಾಂಡಲ್​ವುಡ್ ನಟಿ ರಾಗಿಣಿ ದ್ವಿವೇದಿಯ ಜೊತೆಗೆ ನಟಿ ಸಂಜನಾ, ರಾಹುಲ್, ಲೂಮ್, ಪ್ರಶಾಂತ್ ರಂಕಾ , ರವಿ ಶಂಕರ್, ನಿಯಾಜ್ ಆರು ಮಂದಿಯನ್ನು ನ್ಯಾಯಾದೀಶರು ಪೊಲೀಸ್​​ ಕಸ್ಟಡಿಗೆ ನೀಡಿದ್ದಾರೆ.

ಇನ್ನೂ. ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಆರೋಪ ಪ್ರಕರಣ ಸಂಬಂಧ ಸಿಸಿಬಿ ವಶದಲ್ಲಿರುವ ರಾಗಿಣಿ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸೆ. 14 ರವರೆಗೆ ಮುಂದೂಡಿಕೆಯಾಗಿದೆ.

LEAVE A REPLY

Please enter your comment!
Please enter your name here