ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟಿಯರಾದ ಸಂಜನಾ, ರಾಗಿಣಿ ದ್ವಿವೇದಿ ಸದ್ಯ ಸಿಸಿಬಿ ಅಧಿಕಾರಿಗಳ ಕಸ್ಟಡಿಯಲ್ಲಿದ್ದು ಇಬ್ಬರಿಗೂ ಪೊಲೀಸರು ಡ್ರಿಲ್ ಮಾಡುತ್ತಿದ್ದು, ಈ ನಡುವೆ ಪ್ರಕರಣ ಸಂಬಂಧ ಇಬ್ಬರಿಂದ ಮಾಹಿತಿಗಳನ್ನು ಕಲೆ ಹಾಕಲಾಗುತ್ತದೆ.
ಇನ್ನೂ ನಟಿ ಸಂಜನಾ ಗಲ್ರಾನಿ ಆಸ್ತಿ ಬಗ್ಗೆ ಕೂಡ ಚರ್ಚೆ ಆಗುತ್ತಿದ್ದು, ಸಂಜನಾ ಅವರು ಕೋಟ್ಯಾಂತರ ರೂ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ ಎನ್ನಲಾಗುತ್ತಿದ್ದು, ಪ್ರಕರಣ ಸಂಬಂಧ ಇಡಿ ಕೂಡ ಎಂಟ್ರಿಕೊಟ್ಟಿದ್ದು, ಪ್ರಕರಣ ಸಂಬಂಧ ಬಂಧಿತರಾಗಿರುವ ನಟಿಯರನ್ನು ಸೇರಿದಂತೆ ಹಲವು ಮಂದಿಯನ್ನು ಇಡಿ ವಶಕ್ಕೆ ಪಡೆದುಕೊಂಡು ತನಿಖೆ ನಡೆಸಲಿದ್ದಾರೆ ಎನ್ನಲಾಗಿದ್ದು, ಹವಾಲಾ ಹಣ ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಪಟ್ಟಂತೆ ವಿಚಾರಣೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ.
ಇನ್ನೂ ನಟಿ ಸಂಜನಾ ಗಲ್ರಾನಿ ಆಸ್ತಿ ಕೋಟಿ-ಕೋಟಿ ಮೀರಿದೆ ಎನ್ನುವ ಆರೋಪ ಕೂಡ ಕೇಳಿ ಬಂದಿದ್ದು, ಆಕೆಯ ಆದಾಯಕ್ಕಿಂತ ಹೆಚ್ಚು ಆಸ್ತಿ-ಪಾಸ್ತಿಯನ್ನು ಹೊಂದಿದ್ದಾರೆ ಕೂಡ ಎನ್ನಲಾಗುತ್ತಿದೆ. ಇವೆಲ್ಲದರ ನಡುವೆ ಎರಡು ವರ್ಷಗಳ ಹಿಂದೇಯೇ ನಿರ್ದೇಶಕ ರವಿ ಶ್ರೀವತ್ಸ ಅವರ ನಟಿ ಸಂಜನಾ ಗಲ್ರಾನಿ ಆಸ್ತಿ ಬಗ್ಗೆ ಪ್ರಶ್ನೆ ಮಾಡಿದ್ದರು. ಹೌದು, ಗಂಡ ಹೆಂಡತಿ ಚಿತ್ರದ ಶೂಟಿಂಗ್ ವೇಳೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯದ ಆರೋಪಕ್ಕೆ ನಿರ್ದೇಶಕ ರವಿ ಶ್ರೀವತ್ಸ ಸುದ್ದಿಗೋಷ್ಠಿ ನಡೆಸಿದ್ದ ವೇಳೇಯಲ್ಲಿ ಸಂಜನಾ ಅವರ ಆಸ್ತಿಗೆ ಸಂಬಂಧಪಟ್ಟಂತೆ ಕೆಲವು ಮಾಹಿತಿಗಳನ್ನು ಅವರು ತಿಳಿಸಿಕೊಟ್ಟಿದ್ದರು, ಆಗ ಕೆಲವು ಕನ್ನಡದ ಮಾಧ್ಯಮಗಳು ರವಿ ಶಂಕರ್ ವರ್ತನೆಯನ್ನು ಖಂಡಿಸಿ ಖುದ್ದು ಸಂಜನಾ ಗಲ್ರಾನಿ ಪರವಾಗಿ ಬ್ಯಾಟ್ ಬೀಸಿದ್ದವು ಕೂಡ. ಅಂದೇ ಸಂಬಂಧಪಟ್ಟ ಅಧಿಕಾರಿಗಳು ನಿರ್ದೇಶಕರ ಮಾತನ್ನು ಗಮನಿಸಿ ತನಿಖೆ ಮಾಡಿದ್ದರೆ ಎಲ್ಲಾ ಮಾಹಿತಿಗಳು ಸಿಗುತ್ತಿದ್ದವು ಅಂತ ಜನತೆ ಪ್ರಶ್ನೆ ಮಾಡುತ್ತಿದ್ದಾರೆ. (ಏಜೆನ್ಸೀಸ್)