ನಟ ಅಮೀರ್ ಖಾನ್ ಗೆ ಹರಾಮ್ ಖೋರ್ ಎನ್ನಲಿಲ್ಲ ಯಾಕೆ?

0

ಶಿವಸೇನಾ ಮುಖಂಡ ಹಾಗೂ ಬಾಲಿವುಡ್ ನಟಿಯ ವಿರುದ್ಧ ನಡೆಯುತ್ತಿರುವ ವಾಕ್ಸಮರ ಇದೀಗ ನಟ ಅಮೀರ್ ಖಾನ್ ರನ್ನು ಸುತ್ತುಕೊಂಡಿದೆ.

ಶಿವಸೇನಾ ಮುಖಂಡ ಸಂಜಯ್ ರಾವತ್ ಗೆ ನಟಿ ಕಂಗನಾ ರಣಾವತ್ ಟ್ವಿಟ್ಟರ್ ನಲ್ಲೇ ಟಾಂಗ್ ನೀಡಿದ್ದಾರೆ.

ನಟ ಅಮೀರ್ ಖಾನ್ ಅವರು ಭಾರತದಲ್ಲಿ ಭಯಭೀತರಾಗಿದ್ದಾರೆಂದು ಹೇಳಿದಾಗ, ಯಾರೂ ಅವರನ್ನು ‘ಹರಾಮ್ ಖೋರ್’ಎಂದು ಕರೆಯಲಿಲ್ಲ ಏಕೆ? ಎಂದು ಪ್ರಶ್ನಿಸಿದ್ದಾರೆ.

ಭಾರತದಲ್ಲಿ ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧಗಳಿಗೆ ಸಂಜಯ್ ರಾವತ್ ಯಾವ ರೀತಿಯ ಮನಸ್ಥಿತಿಯನ್ನು ಹೊಂದಿದ್ದಾರೆ ಎಂದು ಕಂಗನಾ ರಣಾವತ್ ವಿಡಿಯೋ ಪೋಸ್ಟ್ ಮಾಡಿ ಆರೋಪಿಸಿದ್ದಾರೆ.

“ಅಮೀರ್ ಖಾನ್ ಅವರು ದೇಶದಲ್ಲಿ ಅಸುರಕ್ಷಿತರೆಂದು ಭಾವಿಸಿದಾಗ, ಯಾರೂ ಅವರನ್ನು ಹರಾಮ್ ಖೋರ್ ಎಂದು ಕರೆಯಲಿಲ್ಲ. ಆದರೆ ಮಹಿಳೆಯಾದ ಮಾತ್ರಕ್ಕೆ ನನ್ನ ವಿರುದ್ಧ ಅನಹೇಳನಕಾರಿ ಮಾತನಾಡಿದ್ದು ಸರಿಯಲ್ಲ. ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪರ ನ್ಯಾಯಕ್ಕಾಗಿ ಹೋರಾಟ ಮುಂದುವರಿಸೋದಾಗಿ ತಿರುಗೇಟು ನೀಡಿದ್ದಾರೆ.

LEAVE A REPLY

Please enter your comment!
Please enter your name here