ನಟ ವಿಜಯ್​ ರಾಘವೇಂದ್ರರ ಕಾರಿಗೆ ಪೆಟ್ರೋಲ್​ ಬದಲು ಡೀಸೆಲ್​ ಹಾಕಿದ ಬಂಕ್ ಸಿಬ್ಬಂದಿ​: ಕಾರಣ ಹೀಗಿದೆ.

0

ಸಿನಿಮಾ ನಟರನ್ನು ಜನರು ಮುಗಿ ಬೀಳುವುದು ಸರ್ವೆ ಸಾಮಾನ್ಯ. ಆದರೆ ಕೆಲವು ವೇಳೆ ಅಭಿಮಾನಿಗಳು ಮಾಡುವ ಎಡವಟ್ಟಗಳು ನಟರು ತೊಂದರೆ ಒಳಗಾಗಬೇಕಾಗುತ್ತದೆ. ಇಂತಹದ್ದೆ ಒಂದು ಎಡವಟ್ಟು ಶಿವಮೊಗ್ಗದಲ್ಲಿ ನಡೆದಿದ್ದು ನಟ ವಿಜಯರಾಘವೇಂದ್ರ ಅವರು ಸಂಕಷ್ಟ ಎದುರಿಸಿದ್ದಾರೆ.

ಆಗಿದ್ದು ಇಷ್ಟೆ.. ಶಿವಮೊಗ್ಗದ ಜಿಲ್ಲೆಯಲ್ಲಿ ಪ್ರೇಕ್ಷಣೀಯ ಸ್ಥಳಗಳಾದ ಜೋಗ್ ಫಾಲ್ಸ್, ಭದ್ರಾ ಅಭಯಾರಣ್ಯ ಸೇರಿ ಹಲವೆಡೆ ಭೇಟಿ ನಟ ವಿಜಯರಾಘವೇಂದ್ರ ಕುಟುಂಬ ಸಮೇತ ಭೇಟಿ ಕೊಟ್ಟಿದ್ದರು. ಇದೇ ವೇಳೆ ನಗರದ ಪೆಟ್ರೋಲ್ ಬಂಕ್‌ನಲ್ಲಿ ಡಿಸೇಲ್ ಹಾಕಿಸಲು ಬಂದ ನಟನನ್ನು ಅಭಿಮಾನಿಗಳು ಮುತ್ತಿಕೊಂಡಿದ್ದಾರೆ. ಈ ವೇಳೆ ಬಂಕ್‌ನ ಸಿಬ್ಬಂದಿ ಪೆಟ್ರೋಲ್ ಬದಲಿಗೆ ಡಿಸೇಲ್ ತುಂಬಿಸಿ ಎಡವಟ್ಟು ಮಾಡಿದ್ದಾರೆ.

ಜೋಗ ಜಲಪಾತ ನೋಡಿಕೊಂಡು ಬೆಂಗಳೂರಿಗೆ ವಾಪಸಾಗುವಾಗ ವಿಜಯ ರಾಘವೇಂದ್ರ ತಮ್ಮ ಕಾರಿಗೆ ಪೆಟ್ರೋಲ್ ಹಾಕಿಸಿಕೊಳ್ಳಲು ನಗರದ ಬಂಕ್‌ವೊಂದಕ್ಕೆ ತೆರಳಿದ್ದರು. ಆದರೆ ಬಂಕ್ ಸಿಬ್ಬಂದಿ ಪೆಟ್ರೋಲ್ ಹಾಕುವ ಬದಲು ವಿಜಯ ರಾಘವೇಂದ್ರ ಅವರನ್ನು ನೋಡಿದ ಖುಷಿಯಲ್ಲಿ ಕಾರಿಗೆ ಟ್ಯಾಂಕ್‌ಗೆ ಡೀಸೆಲ್ ತುಂಬಿದ್ದಾನೆ. ತಾನು ಮಾಡಿದ ತಪ್ಪಿನ ಅರಿವಾಗುತ್ತಿದ್ದಂತೆ ಸಿಬ್ಬಂದಿ ಗಾಬರಿಯಾಗಿ ಬಂಕ್ ಮಾಲೀಕರಿಗೆ ವಿಷಯ ಮುಟ್ಟಿಸಿದ್ದಾರೆ.

ಬಳಿಕ ಬಂಕ್ ಮಾಲೀಕರು ಮತ್ತು ಸಿಬ್ಬಂದಿ ವಿಜಯ ರಾಘವೇಂದ್ರ ಬಳಿ ಕ್ಷಮೆಯಾಚಿಸಿ ಅವರ ಕಾರನ್ನು ಸರ್ವಿಸ್‌ಗೆ ಕಳಿಸಿಕೊಟ್ಟಿದ್ದಾರೆ. ನಂತರ ಪೆಟ್ರೋಲ್ ಬಂಕ್‌ನವರೇ ವಿಜಯ ರಾಘವೇಂದ್ರ ಮತ್ತವರ ಕುಟುಂಬ ಬೆಂಗಳೂರಿಗೆ ತೆರಳಲು ಬೇರೆ ಕಾರಿನ ವ್ಯವಸ್ಥೆ ಮಾಡಿ ಕಳುಹಿಸಿದ್ದಾರೆ.

ನಟ ವಿಜಯರಾಘವೇಂದ್ರ ಕೂಡ ತಮ್ಮ ಕುಟುಂಬ ಸಹಿತ ಭೇಟಿ ನೀಡಿ ಫೋಟೋಗ್ರಫಿ ಮಾಡಿ ಸುಂದರ ಪರಿಸರದಲ್ಲಿ ಎಂಜಾಯ್ ಮಾಡಿದ್ದರು. ಆದರೆ ಶಿವಮೊಗ್ಗದಿಂದ ಬೆಂಗಳೂರಿಗೆ ಹೊರಡುವಾಗ ಕಾರಿಗೆ ಪೆಟ್ರೋಲ್ ಹಾಕಿಸಿಕೊಳ್ಳುವ ವೇಳೆ ಬಂಕಿನಲ್ಲಿ ಈ ಎಡವಟ್ಟು ನಡೆದಿದೆ.

LEAVE A REPLY

Please enter your comment!
Please enter your name here