ನಟ ಸುಶಾಂತ್ ಪ್ರಕರಣ – ಕೋರ್ಟ್ ಮೆಟ್ಟಿಲು ಏರಿದ ನಟಿ ರಿಯಾ! ಇವರಿಂದ ಪ್ರಕಟಿಸಲಾಗಿದೆ – News Alert

0

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವು ಪ್ರಕರಣದಲ್ಲಿ ಮಾಧ್ಯಮಗಳು ತಮ್ಮ ಮಿತಿ ಮೀರಿ ವರ್ತಿಸುತ್ತಿವೆ ಎಂದು ಆಕ್ಷೇಪಿಸಿ ನಟಿ ರಿಯಾ ಚಕ್ರವರ್ತಿ ಕೋರ್ಟ್ ಮೆಟ್ಟಿಲು ಏರಿದ್ದಾರೆ.

ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿರುವ ರಿಯಾ ಚಕ್ರವರ್ತಿ, ತಮ್ಮನ್ನು ಮಾಧ್ಯಮಗಳು ಅಪರಾಧಿಯೆಂಬಂತೆ ತೀರ್ಪು ನೀಡುವ ರೀತಿಯಲ್ಲಿ ವರದಿ ಪ್ರಕಟಿಸುತ್ತಿವೆ ಎಂದು ಆರೋಪಿಸಿದ್ದಾರೆ.

ಬಿಹಾರ ಚುನಾವಣೆಯ ಹಿನ್ನೆಲೆಯಲ್ಲಿ ತಾವು ಈ ಪ್ರಕರಣಕ್ಕೆ ಸಂಬಂಧಿಸಿದ ರಾಜಕೀಯಕ್ಕೆ ಬಲಿಪಶು ಆಗದಂತೆ ಗಮನ ಹರಿಸಬೇಕಿದೆ ಎಂದು ರಿಯಾ ಚಕ್ರವರ್ತಿ ಕೋರ್ಟ್ ಗೆ ಮನವಿ ಮಾಡಿದ್ದಾರೆ.

ಅಲ್ಲದೇ, ಈ ಕಾರಣಕ್ಕಾಗಿಯೇ ಬಿಹಾರ ಪೊಲೀಸರು ಈ ಪ್ರಕರಣವನ್ನು ಸಿಬಿಐಗೆ ವಹಿಸಿರುವುದು ಕೂಡ ಅಕ್ರಮ. ಕಳೆದ 30 ದಿನಗಳಲ್ಲಿ ಸುಶಾಂತ್ ರೀತಿಯಲ್ಲಿ ಅಶುತೋಷ್ ಭಕ್ರೆ ಹಾಗೂ ಸಮೀರ್ ಶರ್ಮಾ ಅವರೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ, ಮಾಧ್ಯಮಗಳು ಮಾತ್ರ ಈ ಕುರಿತು ಮಾತನಾಡುತ್ತಿಲ್ಲ ಎಂದು ಕೂಡ ಅವರು ಮನವಿಯಲ್ಲಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here