ನದಿ ಪ್ರವಾಹದಿಂದ ಕೊಚ್ಚಿಹೊದ ಗ್ರಾಮ

0

ವರದಿಗಾರರು : ಪರಶುರಾಮ ಅಶೋಕ ಮಾದಾರ ಖಾನಾಪೂರ ತಾಲುಕು

ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲ್ಲೂಕಿನ ಹಿರೆ ಹಟ್ಟಿವಳಿ ಗ್ರಾಮದವು ತಾಲ್ಲೂಕಿನ ಮಲಪ್ರಭಾ ನದಿಯ ಪ್ರವಾಹದಿಂದ ಸಂಪೂರ್ಣವಾಗಿ ಕೊಚ್ಚಿಹೊಗಿದೆ.

ಗ್ರಾಮದಲ್ಲಿ ಇದ್ಧ ಸುಮಾರು 200 ಹೆಚ್ಚು ಮನೆಗಳು ಪ್ರವಾಹದ ನಿರಿನಲ್ಲಿ ಮುಳುಗಿ ಬಿದ್ದು ಹೊಗಿವೆ .ಈಗ ಗ್ರಾಮದಕ್ಕೆ ಹೊಗಿನೊಡಿದರೆ ಯಲ್ಲಿ ನೊಡಿದರಲ್ಲಿ ಕುಸಿದು ಬಿದ್ದ ಗೊಡೆಗಳು ಮುರಿದು ಬಿದ್ಧ ಹಂಚು ಮತ್ತು ಕಟ್ಟಿಗೆಳು ಕಾನಿಸುತ್ತಿವೆ ಅಲ್ಲದೆ ಮನೆಗಲ್ಲಿ ಇದ್ಧ ದವಸ ಧಾನ್ಯಗಳು ,ಪಿಟೊಪಕರನಗಳು,ಹಾಸಿಗೆ ಹೊದಿಕೆಯಗಳು ಮತ್ತು ಅಡುಗೆ ಪಾತ್ರೆಗಳು ಮಣ್ಣಿನಲ್ಲಿ ಮುಚ್ಚಿ .ಮಣ್ಣುಪಾಲಾಗಿ ಹೊಗಿವೆ

ಇವನೆಲ್ಲ ಕಳೆದುಕೊಂಡ ಗ್ರಾಮದಲ್ಲಿಯ ಜನರು ತತ್ತರಿಸಿ ಹೊಗಿದ್ದು ದಿಕ್ಕು ತೊಚದೆ ಕಣ್ಣಿರಿನಲ್ಲಿ ಕೈ ತೊಳಿಯುತ್ತಾ ಸರಕಾರಿ ಶಾಲೆಯಲ್ಲಿ ತೆರೆದ ಗಂಜಿ ಕೆಂದ್ರಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ .

ಸ್ಥಳಕ್ಕೆ ಭೇಟಿ ನೀಡಿದ ತಾಲೂಕಾ ಆಡಳಿತ ಅಧಿಕಾರಿಗಳು ಸಂತ್ರಸ್ತ ಜನರ ರಕ್ಷಣೆ ಬೆಕಾದ ಅಗತ್ಯ ಕ್ರಮಗಳನ್ನು ಕೈಕೊಂಡಡಿದ್ಧು.ಮುಂದಿನ ದಿನಗಳಲ್ಲಿ ಇಲ್ಲಿಯ ಜನರಿಗೆ ಶಾಶ್ವತವಾಗಿ ವಸತಿ ಸಮೆತ ಅಗತ್ಯ ಮೂಲಭೂತ ಸೌಲಭ್ಯಗಳನ್ನು ವದಗಿಸಿಕೊಡುವ ಭರವಸೆ ನೀಡಿರುತ್ತಾರೆ.

ಮತ್ತು ಇಗಾಗಲೆ ಗಂಜಿ ಕೆಂದ್ರದಲ್ಲಿ ಆಶ್ರಯ ಪಡೆದುಕೊಂಡ ಇವರಿಗೆ ರಾಜ್ಯದ ಎಲ್ಲ ಸಂಘ ಸಂಸ್ಥೆಯವರು ಮತ್ತು ಜನಪ್ರತಿನಿಧಿಗಳು ಇಲ್ಲಿಗೆ ಬಂದು ಅಗತ್ಯ ಆಹಾರ ಸಾಮಗ್ರಿಗಳು,ಹಾಸಿಗೆ ಹೊದಿಕೆಗಳನ್ನು ನಿಡಿ ಸಾಂತ್ವನ ಹೆಳುತ್ತಿರುವದು ತುಸು ನೆಮ್ಮದಿಯ ವಿಷಯವಾಗಿದೆ.

ಅದೃಷ್ಟವಶಾತ್ ಜನರ ಸಮಯಪ್ರಜ್ಞೆಯಿಂದ ಇಲ್ಲಿ ಯಾವುದೇ ಜೀವ ಹಾನಿ ಯಾಗಿರುವುದಿಲ್ಲ ಮತ್ತು ಪವಾಡ ಸದ್ರುಶ ಎನ್ನುವಂತೆ ಗ್ರಾಮದ ಜೈನ ಮಂದಿರ ಮತ್ತು ಕಲಮೇಶ್ವರ ಮಂದಿರಕ್ಕೆ ಯಾವುದೇ ತರಹದ ಹಾನಿಯಾಗುವುದಿಲ್ಲ .

ಕ್ಯಾಮೆರಾ ಮ್ಯಾನ್ ಅಭಿಲಾಷ ಬಾಳೆಕುಂದ್ರಿ ಜೊತೆ KBBN 24 News ಖಾನಾಪೂರ

LEAVE A REPLY

Please enter your comment!
Please enter your name here