ನಮ್ಮ ತಂದೆಯವರೇ ನನ್ನ ರಾಜಕೀಯ ಗುರು: ಡಾll. ಅಜಯ್ ಸಿಂಗ್.

0

ನಮ್ಮ ತಂದೆಯವರೇ ನನ್ನ ರಾಜಕೀಯ ಗುರು: ಡಾll. ಅಜಯ್ ಸಿಂಗ್.

ಜೇವರ್ಗಿ: ಪಟ್ಟಣದ ನೆಲೋಗಿ ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಧರ್ಮಸಿಂಗ್ ಅವರ ಮೂರನೆಯ ಪುಣ್ಯಸ್ಮರಣೆ ಆಚರಿಸಲಾಯಿತು.

ವಿಧಾನಸಭೆ ಪ್ರತಿಪಕ್ಷದ ಮುಖ್ಯ ಸಚೇತಕರಾದ ಹಾಗೂ ಹಾಲಿ ಶಾಸಕರಾದ ಡಾll. ಅಜಯ್ ಸಿಂಗ್ ತಮ್ಮ ತಂದೆಯವರ ಪುತ್ತಳಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿ
ತಂದೆಯಾಗಿ ನನ್ನ ರಾಜಕೀಯ ಜೀವನದ ಗುರುವಾಗಿ ಬದುಕು ನೀಡಿ, ನಿಮ್ಮದೇ ದಾರಿಯಲ್ಲಿ ನಡೆಯಲು ಸ್ಪೂರ್ತಿ ನೀಡಿದ, ರಾಜ್ಯದ ಮಾಜಿ ಮುಖ್ಯ ಮಂತ್ರಿಗಳಾಗಿ ಎಲ್ಲಾ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಅಪರೂಪದ ರಾಜಕಾರಣಿ ದಿವಂಗತ ಧರಮ್ ಸಿಂಗ್ ಸಾಹೇಬರ 3 ನೇ ಪುಣ್ಯಸ್ಮರಣೆಯ ನಿಮಿತ್ಯ ಕಲಬುರಗಿಯ ನಿವಾಸ ಹಾಗೂ ಸ್ವಗ್ರಾಮ ನೆಲೋಗಿಯಲ್ಲಿ ಕುಟುಂಬದ ಸದಸ್ಯರು ಮತ್ತು ಅಪಾರ ಅಭಿಮಾನಿಗಳೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಅವರಿಗೆ ಕೋಟಿ ಕೋಟಿ ನಮನಗಳನ್ನು ಸಲ್ಲಿಸಲಾಯಿತು ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಾ.ಅಜಯ್ ಸಿಂಗ್ ಶಾಸಕರು ಜೇವರ್ಗಿ ಹಾಗೂ ವಿಧಾನ ಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರು, ವಿಜಯ್ ಸಿಂಗ್ ವಿಧಾನಪರಿಷತ್ ಸದಸ್ಯರು, ಬಸವಕಲ್ಯಾಣ ತಾಲೂಕಿನ ಶಾಸಕರಾದ ನಾರಾಯಣರಾಯ, ಅಲ್ಲಂಪ್ರಭು ಪಾಟೀಲ್ ಮಾಜಿ ವಿಧಾನ ಪರಿಷತ್ ಸದಸ್ಯರು, ರಾಜಶೇಖರ್ ಸಿರಿ ಕಾಂಗ್ರೆಸ್ ಯುವ ಮುಖಂಡರು, ಕಾಶಿರಾಯ ಗೌಡ ಯಲಗೂಡ, ರವಿಚಂದ್ರನ್ ಗುತ್ತೇದಾರ್, ತಾಲೂಕ ದಂಡಾಧಿಕಾರಿ ಸಿದ್ದರಾಯ ಬೋಸಗಿ, ನೆಲೋಗಿ ಯ ಪೊಲೀಸ್ ಠಾಣೆಯ ಪಿಎಸ್ಐ ಮಲ್ಲಣ್ಣ ಯಲಗೂಡ, ಜೀವರ್ಗಿಯ ಸರ್ಕಲ್ ಇನ್ಸ್ಪೆಕ್ಟರ್ ರಮೇಶ್ ರೊಟ್ಟಿ, ಜೇವರ್ಗಿ ಪಿಎಸ್ಐ ಮಂಜುನಾಥ್ ಹೂಗಾರ್, ತಾಲೂಕ ಪಂಚಾಯಿತಿ ಮುಖ್ಯಾಧಿಕಾರಿ ವಿಲಾಸ್ ರಾಜ್, ಸಮಸ್ತ ನೆಲೋಗಿ ಗ್ರಾಮಸ್ಥರು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಕ್ಷತೀತವಾಗಿ ಧರ್ಮಸಿಂಗ್ ಅಭಿಮಾನಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here