“ನಮ್ಮ ಮಗಳು ಹೆಣ್ಣು ಹುಲಿ ಇದ್ದಂತೆ, ನಾವು ಯಾವುದಕ್ಕೂ ಹೆದರೋಲ್ಲ” : ರಾಗಿಣಿ ತಾಯಿ ರೋಹಿಣಿ ಪ್ರತಿಕ್ರಿಯೆ

0

ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ನಟಿ ರಾಗಿಣಿ ಭೇಟಿಗೆ ಪೋಷಕರಿಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.

ಮಗಳ ಭೇಟಿಗೆ ಅವಕಾಶ ಸಿಗದೇ ರಾಗಿಣಿ ಪೋಷಕರು ವಾಪಸ್ ಆಗಿದ್ದಾರೆ, ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ರಾಗಿಣಿ ತಾಯಿ ರೋಹಿಣಿ ‘ ನಮ್ಮ ಮಗಳು ಹತ್ತು ವರ್ಷದಿಂದ ಕನ್ನಡ ಚಿತ್ರರಂಗದಲ್ಲಿ ದುಡಿಯುತ್ತಿದ್ದಾಳೆ, ನಮ್ಮ ಬಳಿ ಇರುವುದು ಒಂದೇ ಒಂದು ಪ್ಲ್ಯಾಟ್. ನಮ್ಮ ಬಳಿ ಮೂರು ಮೂರು ಫ್ಲಾಟ್ ಇದೆ ಎಂದು ಮಾಧ್ಯಮಗಳಲ್ಲಿ ಬಿಂಬಿಸಲಾಗುತ್ತಿದೆ. ನಾವು ಇಡಿಗೆ ಈಗಾಗಲೇ ಈ ಬಗ್ಗೆ ಮಾಹಿತಿ ನೀಡಿದ್ದೇವೆ, ನಮ್ಮ ಮಗಳು ಹೆಣ್ಣು ಹುಲಿ ಯಾವುದಕ್ಕೂ ಹೆದರುವುದಿಲ್ಲ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here