ನಮ್ಮ ಮಲೆನಾಡು ಭೂಲೋಕದ ಸ್ವರ್ಗ…

0

ನಮ್ಮ #ಮಲೆನಾಡು ಎಷ್ಟು ಚಂದ ಗೊತ್ತಾ..!!!
ನಮ್ಮ ಮಲೆನಾಡು ಭೂಲೋಕದ ಸ್ವರ್ಗ…
ಮಲೆನಾಡಿನ ಪರಿಸರ ಇಷ್ಟ ಆದರೆ
ಒಂದು ಮೆಚ್ಚುಗೆ ನೀಡಿ….
ಮಲೆನಾಡು ಎಂದಾಕ್ಷಣ ತಕ್ಷಣ ನೆನಪಾಗುವುದು ಬೆಟ್ಟ, ಗುಡ್ಡ, ನದಿ, ತೊರೆ, ಕಾಡು, ಗದ್ದೆಯ ಕೋಗು, ಹಳ್ಳ, ಮಳೆಗಾಲದಲ್ಲಿ ಉಸಿರುಕಟ್ಟಿ ಹೊಯ್ಯುವ ಮಳೆ, ಚಳಿಗಾಲದಲ್ಲಿ ಮಧ್ಯಾಹ್ನವಾದರೂ ಮುಚ್ಚಿಕೊಳ್ಳುವ ಕಾವಣ, ಅಡಿಕೆ– ಕಾಫಿ ತೋಟ… ಹೀಗೆ ಮಲೆನಾಡು ಎಲ್ಲ ಚಿತ್ರಣಗಳನ್ನು ಕಣ್ಣ ಮುಂದೆ ತಂದು ನಿಲ್ಲಿಸುತ್ತದೆ. ಮಲೆನಾಡನ್ನು ಕೇವಲ ಪದಗಳಲ್ಲಿ ವರ್ಣಿಸಲು ಸಾಧ್ಯವೇ ಇಲ್ಲ ಎಂದು ರಾಷ್ಟ್ರಕವಿ ಕುವೆಂಪು ಅವರೇ ಹೇಳಿದ್ದಾರೆ.

ಮಲೆನಾಡು ಎಂದರೆ ಕೇವಲ ಬೆಟ್ಟ ಗುಡ್ಡ, ನದಿ ಕಾಡು ಅಲ್ಲದೆ ಮಲೆನಾಡಿಗೂ ಒಂದು ವಿಶಿಷ್ಟವಾದ ಸಂಸ್ಕೃತಿ, ಆಹಾರ, ವೇಷಭೂಷಣ, ಜೀವನಶೈಲಿ, ಸಾಹಿತ್ಯ, ಹೋರಾಟ, ಸಾಮಾಜಿಕ ಸ್ಥಿತಿಗತಿ ಎಲ್ಲವೂ ಇದೆ.

ಮಲೆನಾಡಿನಿಂದ ದೂರ ಇರುವವರಿಗೆ ತಮ್ಮೂರಿನ ನೆನಪು ಮಾತ್ರ ಉಳಿದಿರುತ್ತದೆ. ಇಲ್ಲೆಲ್ಲ ಮಳೆ ಬಂದರೆ ‘ಇದು ಯಾವ ಸೀಮೆ ಮಳೆ ನಮ್ಮೂರಿನಲ್ಲಿ ಯಾವ ರೀತಿ ಮಳೆ ಸುರಿಯುತ್ತಾ ಇತ್ತು’ ಎಂದು ಮನಸಿನಲ್ಲೇ ಅಂದುಕೊಳ್ಳುತ್ತಾರೆ.

LEAVE A REPLY

Please enter your comment!
Please enter your name here