ನವಲಗುಂದ ಕರ್ನಾಟಕ ಪಿಂಜಾರ್, ನದಾಫ್, ಮನ್ಸೂರಿ ಸಂಘಗಳ ಮಹಾಮಂಡಳದ ವತಿಯಿಂದ ಕಾರ್ಗಿಲ್ ವಿಜಯೋತ್ಸವ ಆಚರಣೆ

0

ಸ್ಲಗ್:- ಕಾರ್ಗಿಲ್ ವಿಜಯೋತ್ಸವ ಆಚರಣೆ
ಸ್ಥಳ:- ನವಲಗುಂದಾ
ಕರ್ನಾಟಕ ಪಿಂಜಾರ, ನದಾಫ, ಮನ್ಸೂರಿ ಸಂಘಗಳ ಮಹಾಮಂಡಳದ ವತಿಯಿಂದ ಕಾರ್ಗಿಲ್ ವಿಜಯೋತ್ಸವ ಆಚರಣೆ

ನವಲಗುಂದ : ಇಲ್ಲಿಯ ಪೊಲೀಸ್ ಠಾಣಾ ಆವರಣದಲ್ಲಿ ಕರ್ನಾಟಕ ಪಿಂಜಾರ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯೋತ್ಸವ ದಿನದಂದು ಮಾತನಾಡಿ ಭಾರತೀಯ ಯೋಧರು ದೇಶ ಸೇವೆಗಾಗಿ ಸದಾ ಸಿದ್ದರಾಗಿ ಹೋರಾಟಕ್ಕೆ ನಿಂತಿರುತ್ತಾರೆ. ಅಂತಹ ಯೋಧರನ್ನು ಗುರ್ತಿಸಿ ಸನ್ಮಾನಿಸುತ್ತಿರುವುದು ಒಳ್ಳೇಯ ಕಾರ್ಯವೆಂದು ಡಿ.ವಾಯ್.ಎಸ್.ಪಿ ರವೀಂದ್ರ ನಾಯಕ ಅವರು ಹೇಳಿದರು.

ಸೇನಾಧಿಕಾರಿಗಳ ಆದೇಶವನ್ನು ತಮ್ಮ ಪ್ರಾಣವನ್ನು ಲೆಕ್ಕಿಸದೆ ಮುನ್ನುಗ್ಗಿ ಶತ್ರುಗಳ ಸದೆಪಡೆಯುವ ಗುರಿಯೊಂದೆ ಇರುತ್ತದೆ. ಭಾರತದ ಹೆಮ್ಮೆಯ ಯೋಧರನ್ನು ಇಂತಹ ಸಂದರ್ಭದಲ್ಲಿ ಅಭಿನಂಧಿಸುತ್ತೇನೆಂದು ಹೇಳಿದರು.

ಅವರು ಭಾನುವಾರ 21 ನೇ ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ಕರ್ನಾಟಕ ಪಿಂಜಾರ, ನದಾಫ, ಮನ್ಸೂರಿ ಸಂಘಗಳ ಮಹಾಮಂಡಳದÀ ವತಿಯಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧ ಜಾವೀದ ಹುಗ್ಗಿ ಅವರಿಗೆ ಸನ್ಮಾನಿಸಿ ಗೌರವಿಸಿದರು.

ಕರ್ನಾಟಕ ಪಿಂಜಾರ, ನದಾಫ, ಮನ್ಸೂರಿ ಸಂಘಗಳ ಮಹಾಮಂಡಳದ ರಾಜ್ಯಾಧ್ಯಕ್ಷ ಡಾ. ಅಬ್ದುಲರಝಾಕ ನದಾಫ ಮಾತನಾಡಿ ಪ್ರತಿವರ್ಷದಂತೆ ಈ ವರ್ಷವು ನಮ್ಮ ಸಂಘದಿಂದ ಕಾರ್ಗಿಲ್ ವಿಜಯೋತ್ಸವದ ದಿನದಂದು ಸೇನೆಯಲ್ಲಿ ಸೇವೆಸಲ್ಲಿಸುತ್ತಿರುವ ಯೋಧರನ್ನು ಗುರ್ತಿಸಿ ಅವರಿಗೆ ಸನ್ಮಾನಿಸುತ್ತಾ ಬಂದಿರುತ್ತೇವೆ.

ಕಾರ್ಗಿಲ್ ಹೋರಾಟ ಇವತ್ತಿಗೂ ಯೋಧರಿಗೆ ಒಂದು ಮಾದರಿಯಂತಾಗಿದೆ. ಯಾವತ್ತು ಮರಿಯಲಾಗದಂತಾ ದಿನ ಕಾರ್ಗಿಲ್ ಹೋರಾಟದ ದಿನವಾಗಿದೆ. ಯೋಧರ ದಿಟ್ಟ ಹೋರಾಟದಿಂದ ನಾವೆಲ್ಲರೂ ಚನ್ನಾಗಿರಲು ಸಾದ್ಯವೆಂದು ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಜೀವನ ಪವಾರ, ಮಹಾಂತೇಶ ಭೋವಿ, ಮೋದಿನಸಾಬ ಶಿರೂರ. ಹಿರಿಯರಾದ ನಭೀಸಾಬ ನದಾಫ, ಶಮೀರ ಇಂಜನೀಯರ್, ಮಂಜುನಾಥ ಕುಂಕುಮಗಾರ, ಸಿ.ಪಿ.ಐ ಚಂದ್ರಶೇಖರ ಮಠಪತಿ, ಪಿ.ಎಸ್.ಐ ಜಯಪಾಲ ಪಾಟೀಲ ಇತರರು ಇದ್ದರು.

LEAVE A REPLY

Please enter your comment!
Please enter your name here