ನಾನೂ ಉಸಿರಾಡಬೇಕಿದೆ; ಇನ್​ಸ್ಟಾಗ್ರಾಂ ತ್ಯಜಿಸಿದ ಸೂರಜ್​ ಪಾಂಚೋಲಿ..

0

ಸುಶಾಂತ್ ಸಿಂಗ್​ ಆತ್ಮಹತ್ಯೆಯ ಪ್ರಕರಣ ಒಂದೆಡೆ ಸಾಗುತ್ತಿದ್ದರೆ, ಅದರ ಜತೆಗೆ ಸುಶಾಂತ್​ ಮಾಜಿ ಮ್ಯಾನೇಜರ್​ ದಿಶಾ ಸಾಲಿಯಾನ್​ ಆತ್ಮಹತ್ಯೆ ಬಗ್ಗೆಯೂ ತನಿಖೆ ನಡೆಯುತ್ತಿದೆ. ಇಬ್ಬರ ಆತ್ಮಹತ್ಯೆಗೆ ಸಾಮ್ಯತೆ ಇದೆ ಎಂದು ಪೊಲೀಸ್​ ಇಲಾಖೆ ಸಾವಿಗೆ ನಿಖರ ಕಾರಣ ಏನಿರಬಹುದೆಂಬ ಹುಡುಕಾಟದಲ್ಲಿದೆ. ಈ ನಡುವೆ ಇದೇ ದಿಶಾ ಪ್ರಕರಣದಲ್ಲಿ ಬಾಲಿವುಡ್​ ನಟ ಸೂರಜ್​ ಪಾಂಚೋಲಿ ಹೆಸರೂ ತಳುಕು ಹಾಕಿಕೊಂಡ ಹಿನ್ನೆಲೆಯಲ್ಲಿ ಸೂರಜ್​ ಸೋಷಿಯಲ್​ ಮೀಡಿಯಾ ತ್ಯಜಿಸಲು ಮುಂದಾಗಿದ್ದಾರೆ.

ಹೌದು, ದಿಶಾ ಆತ್ಮಹತ್ಯೆ ಪ್ರಕರಣದಲ್ಲಿ ಸೂರಜ್​ ಪಾಂಚೋಲಿ ಹೆಸರು ತಳುಕು ಹಾಕಿಕೊಂಡಿದ್ದೇ ತಡ, ಮುಂಬೈ ಪೊಲೀಸ್​ಗೆ ಸೂರಜ್​ ದೂರು ನೀಡಿದ್ದಾರೆ. ಸುಖಾಸುಮ್ಮನೆ ಪ್ರಕರಣದಲ್ಲಿ ನನ್ನ ಹೆಸರನ್ನು ಜೋಡಿಸಿ ಮಾನಸಿಕವಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ವರ್ಸೋವಾ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದೆಲ್ಲದರಿಂದ ಬೇಸತ್ತ ಸೂರಜ್​ ಇನ್​ಸ್ಟಾಗ್ರಾಂನಿಂದ ನಿರ್ಗಮಿಸಿದ್ದಾರೆ.

: ಇನ್ಮುಂದೆ ಹೊಸ ಇನ್ನಿಂಗ್ಸ್​ ಆಡ್ತಾರಂತೆ ಸೋನು . ಏನದು?

ಈಗಾಗಲೇ ಇನ್​ಸ್ಟಾದಲ್ಲಿರುವ ಒಂದು ಪೋಸ್ಟ್​ ಹೊರತುಪಡಿಸಿ ಮಿಕ್ಕ ಎಲ್ಲ ಪೋಸ್ಟ್ ಡಿಲಿಟ್ ಮಾಡಿರುವ ಸೂರಜ್​, ‘ಸಿ ಯೂ ಇನ್​ಸ್ಟಾಗ್ರಾಂ.. ಮತ್ತೆ ಮುಂದೆ ಒಂದು ದಿನ ಈ ಜಗತ್ತಿನಲ್ಲಿ ಒಳ್ಳೇಯ ಜಾಗ ಸಿಕ್ಕರೆ ಯಾವಾಗಾದರೂ ಸಿಗೋಣ. ಏಕೆಂದರೆ ನಾನೂ ಉಸಿರಾಡಬೇಕಿದೆ’ ಎಂಬ ಪೋಸ್ಟ್ ಹಾಕಿ ಸೋಷಿಯಲ್ ಮೀಡಿಯಾದಿಂದ ದೂರ ಸರಿದಿದ್ದಾರೆ.

LEAVE A REPLY

Please enter your comment!
Please enter your name here