ನಾರಾಯಣರಾವ್ ರಿಗೆ ಶ್ರದ್ಧಾಂಜಲಿ

0

ನಾರಾಯಣರಾವ್ ರಿಗೆ ಶ್ರದ್ಧಾಂಜಲಿ
💐💐💐💐💐💐
ಎಮ್ಮಿಗನೂರು :- 25/09/2020

ಉತ್ತರ ಕರ್ನಾಟಕದ.. ಗಂಗಾಕುಲದ ರಾಜಕೀಯದ ಭೀಷ್ಮರೆಂದೇ ಕರೆಯಬಹುದಾದ, ಅವರ ವಾಕ್ಚರ್ತುರ್ಯವನ್ನು ಬಣ್ಣಿಸಲಾಗದ ಮಾತಿನ ಚತುರ, ಉತ್ತರ ಕರ್ನಾಟಕದ ನಮ್ಮ ಸಮಾಜದ ಧೀಮಂತ ರಾಜಕೀಯ ನಾಯಕರಾದ ದಿ : ಬಿ. ನಾರಾಯಣ ರಾವ್ ಅವರ ಸಾವು ಇಂದು ಕೋಲಿ, ಕಬ್ಬಲಿಗ, ಅಂಬಿಗ, ಗಂಗಾಮತಸ್ಥರ ಸಮಾಜಕ್ಕೆ ಮತ್ತು ಸಮಾಜದ ಕೆಲ ವ್ಯಕ್ತಿಗಳಿಗೆ…. ಮರೆಯಲಾಗದ ದುಃಖದ ಕರಾಳ ದಿನ. ಅಷ್ಟೇ ಅಲ್ಲ…, ಸಮಾಜಕ್ಕೆ ತುಂಬಲಾರದ ನಷ್ಟ…ಇಂದು… ಈ ಮರೆಯಾದ ಮಾಣಿಕ್ಯನ ನೆನಪು ಮಾತ್ರ . ಇವರ ದುಃಖವನ್ನು ಬರಿಸಲಾಗದ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನ ಎಮ್ಮಿಗನೂರು ಗ್ರಾಮದ ಕೋಲಿ, ಕಬ್ಬಲಿಗ, ಅಂಬಿಗ, ಗಂಗಾಮತ ಸಮಾಜದ ಮುಖಂಡರು ಅವರನ್ನು ಕಳೆದುಕೊಂಡ ದುಃಖದಲ್ಲಿಯೇ ಭಾವಪೂರ್ಣ ಶ್ರದ್ಧಾಂಜಲಿ ಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಬನಶಂಕರಿ, ವೀರೇಂದ್ರ ರೆಡ್ಡಿ, ಗ್ರಾಮದ ಗಂಗಾಮತಸ್ಥರ ಮುಖಂಡರಾದ ಬಡಿಗೇರ ಪಿಡ್ಡಪ್ಪ , ಕರೆಮರೆ ಧರ್ಮಣ್ಣ , ಚನ್ನಳ್ಳಿ ಜಡೇಪ್ಪ , ಆದಿಮನೆ ಸಣ್ಣ ಜಡೇಪ್ಪ , ಕರೆಮರೆ ಜಯರಾಮ, ಗುಂಡ್ರಾಣಿ ಜಡೇಪ್ಪ , ನಾಗೇಶ ಹೇರೂರ, ಹೆಬ್ಬಟ ರಾಮಾಂಜನಿ , ಮಾರೇಪ್ಪ , ಹುಲುಗಪ್ಪ, ಸಮಾಜದ ಯುವಕರಾದ ಚನ್ನಳ್ಳಿ ಮಹೇಶ, ಸುಗೂರು ಜಡೇಶ, ಪರಶುರಾಮ, ಕುಮಾರ, ಕಾಡಸಿದ್ದ, ಕುಬೇರ, ಕೃಷ್ಣ, ಮಹೇಶ ಕಂಪ್ಲಿ , ಹಾಗೂ ಗಂಗಾಮತ ಸಮಾಜ ಬಂಧುಗಳು ಭಾಗವಹಿಸಿದ್ದರು.

ಇಂತಿ
ಚನ್ನಳ್ಳಿ ಮಹೇಶ

LEAVE A REPLY

Please enter your comment!
Please enter your name here