ನಾಳೆಯಿಂದ ಮೆಟ್ರೋ ಸಂಚಾರ: ರೈಲುಗಳ ಸಮಯ ಮತ್ತು ಇತರ ಮಾಹಿತಿ ಇಲ್ಲಿದೆ

0

ಕೊರೋನಾ ಹಿನ್ನೆಲೆ ಮಾರ್ಚ್​ 22ರಿಂದ ಸ್ಥಗಿತಗೊಂಡಿದ್ದ ‘ನಮ್ಮ ಮೆಟ್ರೋ’ ರೈಲು ಸೋಮವಾರದಿಂದ (ಸೆಪ್ಟೆಂಬರ್ 7) ಸಂಚಾರ ಆರಂಭಿಸಲಿದೆ. ಇದಕ್ಕಾಗಿ ಬಿಎಂಆರ್​ಸಿಎಲ್​ ಎಲ್ಲಾ ಪೂರ್ವ ಸಿದ್ಧತೆಗಳನ್ನ ಮಾಡಿಕೊಂಡಿದ್ದು SOP (Standard Operating Procedure) ಬಿಡುಗಡೆ ಮಾಡಿದೆ.

ಮೊದಲ ಹಂತ: ಸೆಪ್ಟೆಂಬರ್​ 7ರಿಂದ 10ರವರೆಗೆ (4 ದಿನ) ನೇರಳೆ ಮಾರ್ಗವಾದ ಬೈಯಪ್ಪನ ಹಳ್ಳಿ-ಮೈಸೂರು ರಸ್ತೆ ನಡುವೆ ಕಡಿಮೆ ಸಂಖ್ಯೆಯ ರೈಲುಗಳು ಸಂಚರಿಸಲಿವೆ. ಈ ಅವಧಿಯಲ್ಲಿ ಬೆಳಗ್ಗೆ 8ರಿಂದ 11ರವರೆಗೆ ಮತ್ತು ಸಂಜೆ 4.30ರಿಂದ 7.30ರವರೆಗೆ ತಲಾ 5 ನಿಮಿಷಗಳ ಅಂತರದಲ್ಲಿ ರೈಲುಗಳು ಕಾರ್ಯನಿರ್ವಹಿಸಲಿವೆ.

ಎರಡನೇ ಹಂತ: ಸೆಪ್ಟೆಂಬರ್ 9ರಿಂದ 10ರವರೆಗೆ (2 ದಿನ) ಹಸಿರು ಮಾರ್ಗವಾದ ನಾಗಸಂದ್ರ-ಯಲಚೇನಹಳ್ಳಿ ನಿಲ್ದಾಣಗಳ ನಡುವೆ ಕಡಿಮೆ ಸಂಖ್ಯೆಯ ರೈಲುಗಳು ಸಂಚರಿಸಲಿವೆ. ಈ ಅವಧಿಯಲ್ಲೂ ಬೆಳಗ್ಗೆ 8ರಿಂದ 11ರವರೆಗೆ ಮತ್ತು ಸಂಜೆ 4.30ರಿಂದ 7.30ರವರೆಗೆ ತಲಾ 5 ನಿಮಿಷಗಳ ಅಂತರದಲ್ಲಿ ರೈಲುಗಳು ಕಾರ್ಯನಿರ್ವಹಿಸಲಿವೆ.

ಮೂರನೇ ಹಂತ: ಸೆಪ್ಟೆಂಬರ್​ 11ರಿಂದ ಎರಡೂ ಮಾರ್ಗದಲ್ಲಿ ಪೂರ್ಣಪ್ರಮಾಣದಲ್ಲಿ ಮೆಟ್ರೋ ಸಂಚಾರ ಆರಂಭವಾಗಲಿದೆ. ಅಂದ್ರೆ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ರೈಲುಗಳು ಸಂಚರಿಸಲಿವೆ.

– ಸಾಮಾಜಿಕ ಅಂತರ ಕಾಪಾಡುವ ಸಲುವಾಗಿ ಗರಿಷ್ಠ 400 ಜನ ಮಾತ್ರ ಏಕಕಾಲದಲ್ಲಿ ಪ್ರಯಾಣಿಸಬಹುದು

– ಎಲ್ಲಾ ಪ್ರಯಾಣಿಕರು ಸ್ಮಾರ್ಟ್ ಕಾರ್ಡ್ ಹೊಂದಿರಬೇಕು. ಯಾವುದೇ ನಿಲ್ದಾಣದಲ್ಲಿ ಟೋಕನ್ ಮಾರಾಟ ಇರುವುದಿಲ್ಲ.

– ಸ್ಮಾರ್ಟ್​ ಕಾರ್ಡ್​ ಇಲ್ಲದವರು ನಿಲ್ದಾಣದಲ್ಲಿ ನಿಗದಿಪಡಿಸಿದ ಸ್ಥಳಗಳಲ್ಲಿ ಕ್ಯಾಶ್​ಲೆಸ್​ ಟ್ರಾನ್ಸಾಕ್ಷನ್ ಮೂಲಕ ಕಾರ್ಡ್ ಪಡೆಯಬಹುದು.

– ಯಾವುದೇ ನಿಲ್ದಾಣದಲ್ಲಿ ಸ್ಮಾರ್ಟ್​ ಕಾರ್ಡ್​ ರೀಚಾರ್ಜ್ ಮಾಡುವುದಿಲ್ಲ. ನಮ್ಮ ಮೆಟ್ರೋ ಅಪ್ಲಿಕೇಶನ್​ ಅಥವಾ ಬಿಎಂಆರ್​ಸಿಎಲ್​ ವೆಬ್​ಸೈಟ್​ ಮೂಲಕ ರೀಚಾರ್ಜ್ ಮಾಡಬಹುದು.

– ಪ್ರವೇಶ ಮತ್ತು ನಿರ್ಗಮನ ಗೇಟ್​ಗಳಲ್ಲಿ ಇಟ್ಟಿರುವ ಕಾರ್ಡ್​ ರೀಡರ್​ನಲ್ಲಿ ಸ್ಮಾರ್ಟ್​ ಕಾರ್ಡ್​ ಇಡುವ ಬದಲು ಅದನ್ನ ಗೇಟ್​ ರೀಡರ್ ಬಳಿ ತೋರಿಸಬೇಕು.

– ಪ್ರವೇಶ ದ್ವಾರಗಳಲ್ಲಿ ಇಟ್ಟಿರುವ ಹ್ಯಾಂಡ್ ಸ್ಯಾನಿಟೈಸರ್​ ಅನ್ನು ಎಲ್ಲಾ ಪ್ರಯಾಣಿಕರು ಬಳಸಬೇಕು.

– ಪ್ರಯಾಣಿಕರು ಥರ್ಮಲ್ ಸ್ಕ್ಯಾನರ್ ಎದುರು ತಮ್ಮ ಕೈಗಳನ್ನು ಇಡಬೇಕು. ದೇಹದ ತಾಪಮಾನ 37 ಡಿಗ್ರಿ ಸೆಲ್ಸಿಯಸ್​ಗಿಂತ ಕಡಿಮೆ ಇದ್ದರೆ ಮಾತ್ರ ಅವಕಾಶ.

– ಸೋಂಕಿನ ಲಕ್ಷಣಗಳಾದ ಕೆಮ್ಮು, ಉಸಿರಾಟದ ತೊಂದರೆ ಇದ್ದವರಿಗೆ ಅವಕಾಶವಿಲ್ಲ. ಅಂತಹವರ ಮಾಹಿತಿ ಪಡೆದು ಆರೋಗ್ಯ ತಪಾಸಣೆಗೆ ಕಳಿಸಲಾಗುತ್ತೆ.

– ಮಾಸ್ಕ್​ ಧರಿಸದ ಯಾವುದೇ ಪ್ರಯಾಣಿಕನಿಗೆ ಮೆಟ್ರೋ ರೈಲಿನಲ್ಲಿ ಸಂಚರಿಸಲು ಅವಕಾಶವಿಲ್ಲ.

– ಒಬ್ಬ ಪ್ರಯಾಣಿಕ ಒಂದೇ ಬ್ಯಾಗ್​ ಕೊಂಡೊಯ್ಯಲು ಅವಕಾಶ. ಆರೋಗ್ಯ ಸೇತು ಆಯಪ್​ ಬಳಕೆಗೆ ಉತ್ತೇಜನ.

– ಎಲ್ಲಾ ಪ್ರಯಾಣಿಕರು 2 ಮೀಟರ್ ಅಂತರ ಕಾಪಾಡಬೇಕು. ಮೆಟ್ರೋ ನಿಲ್ದಾಣ, ಲಿಫ್ಟ್, ರೈಲಿನ ಒಳಗೆ ಹಾಕಿರುವ ಹಳದಿ ಬಣ್ಣದ ಪಟ್ಟಿ ಮೇಲೆಯೇ ನಿಲ್ಲಬೇಕು.

– ಎಸ್ಕಲೇಟರ್​ಗಳಲ್ಲಿ ಒಂದು ಮೆಟ್ಟಿಲು ಬಿಟ್ಟು ನಿಲ್ಲಬೇಕು. ಲಿಫ್ಟ್​ಗಳಲ್ಲಿ 4ರಿಂದ 6 ಜನ ಮಾತ್ರ ಹೋಗಬೇಕು.

– ನಿಲ್ದಾಣಗಳಲ್ಲಿ ಜನರ ಗುಂಪನ್ನು ನಿಯಂತ್ರಿಸಲು ಕಷ್ಟವಾದ್ರೆ ಆ ನಿಲ್ದಾಣಗಳಲ್ಲಿ ರೈಲುಗಳ ನಿಲುಗಡೆ ಇರುವುದಿಲ್ಲ.

LEAVE A REPLY

Please enter your comment!
Please enter your name here