ನಿನ್ನೆ ಭಾರಿ ಮಳೆಗೆ ತತ್ತರಿಸಿ ಹೋದ ಕೋನಹಳ್ಳಿ ಗ್ರಾಮದ ಜನರು | ವರ್ಷಗಳ ಕಳೆದರೂ ಇಲ್ಲಿನ ಸಮಸ್ಯೆಗೆ ಪರಿಹಾರವೇ ಇಲ್ಲ

0

ನಿನ್ನೆ ಭಾರಿ ಮಳೆಗೆ ತತ್ತರಿಸಿ ಹೋದ ಕೋನಹಳ್ಳಿ ಗ್ರಾಮದ ಜನರು

ವರ್ಷಗಳ ಕಳೆದರೂ ಇಲ್ಲಿನ ಸಮಸ್ಯೆಗೆ ಪರಿಹಾರವೇ ಇಲ್ಲ

ಈ ಗ್ರಾಮಕ್ಕೆ ಕ್ಯಾರೆ ಎನ್ನದ ಅಭಿವೃದ್ಧಿ ಅಧಿಕಾರಿಗಳು

ಯಾದಗಿರಿ ಜಿಲ್ಲೆಯ
ವಡಗೇರಾ ತಾಲೂಕಿನ ಕೋನಹಳ್ಳಿ ಗ್ರಾಮದಲ್ಲಿ ರಾತ್ರಿ ಸುರಿದ ಭಾರಿಮಳೆಗೆ ಹರಿಜನ ವಾರ್ಡ್ ಸಂಪೂರ್ಣ ಜಲವೃತ್ತಗೊಂಡಿದೇ ಮತ್ತು ಮನೆಯಲ್ಲಿಯು ಸಹ ನೀರು ತುಂಬಿಕೊಂಡಿರುವುದು ಜನರ ತೊಂದರೆಯನ್ನು ಅನುಭವಿಸುತ್ತಿದ್ದಾರೆ ಯಾರು ಕೇಳದಂತೆಯಾಗಿದೆ ನಮ್ಮ ಬದುಕು

ಮಳೆಗಾಲ ಬಂತೆಂದರೆ ಸಾಕು ಈ ಗ್ರಾಮಕ್ಕೆ ಸಂಕಷ್ಟದ ಬದುಕು ಎದುರಾಗುತ್ತದೆ ಇಲ್ಲಿನ ಜನರಿಗೆ ತೊಂದರೆ ಎದುರಾಗುತ್ತದೆ ಈ ಗ್ರಾಮ ಯಾರಿಗೂ ಕಾಣದಂತಾಗಿದೆ ಅಧಿಕಾರಿಗಳಿಗೆ.

ಪ್ರತಿವರ್ಷ ಕೂಡ ಮಳೆಗಾಲದಲ್ಲಿ ಅಧಿಕಾರಿಗಳು ಬಂದು ಜನರನ್ನು ಭೇಟಿ ಮಾಡುತ್ತಾರೆ ಇಲ್ಲಿ ಯಾವುದೇ ಪರಿಹಾರ ಕೂಡ ಮಾಡಿಲ್ಲ ಅಧಿಕಾರಿಗಳು.

ಕೋನಹಳ್ಳಿ ಗ್ರಾಮವು ವಡಗೇರ ಪಂಚಾಯತಿ ವ್ಯಾಪ್ತಿಗೆ ಒಳಪಟ್ಟಿದೆ.
ಪಂಚಾಯತಿಗೆ ಹಲವಾರು ಸಾರಿ ಗ್ರಾಮಸ್ಥರು ಊರಿನ ಸಮಸ್ಯೆಯನ್ನು ಹೇಳಿದ್ದಾರೆ ಆದರೆ ಅಭಿವೃದ್ಧಿ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸುತ್ತಿಲ್ಲ
ಎಷ್ಟೇ ಸಾರಿಹೇಳಿದರು ಇತ್ತ ಗಮನವಿಲ್ಲ.

ನಿನ್ನೆ ತಡ ರಾತ್ರಿ ಸುರಿದ ಭಾರಿ ಮಳೆಗೆ ಕೋನಹಳ್ಳಿ ಗ್ರಾಮ ತತ್ತರಿಸಿ ಹೋಗಿದೆ ಒಂದು ಕಡೆ ಕೊರೋನಾದ ಕಾಟ ಇನ್ನೊಂದು ಕಡೆ ಮಳೆರಾಯನ ಆರ್ಭಟ.

ಸುಮಾರು ಈ ಗ್ರಾಮದಲ್ಲಿ 20ಕ್ಕು ಮನೆಗಳು ಜಲಾವೃತಗೊಂಡಿವೆ ನಿನ್ನೆ ರಾತ್ರಿ ಇಡೀ ಜನರು ನಿದ್ದೆ ಮಾಡಿಲ್ಲ
ಮನೆಗಳಲ್ಲಿ ನೀರು ತುಂಬಿಕೊಂಡು ಬದುಕು ಅದೋಗತಿ ಎನ್ನುತ್ತಿದೆ

ಭೀಮಮ್ಮ ಗಂ/ ಮಲ್ಲಪ್ಪ
ಭೀಮಪ್ಪ ತಂ/ ಹಣಮಂತ
ಅಯ್ಯಳಪ್ಪ ತಂ/ ಕರೆಪ್ಪ ಮರೆಮ್ಮ ತಂ/ ಸೈದಪ್ಪ
ಸೋನಮ್ಮ ಗಂ/ತಿಪ್ಪಣ್ಣ
ಸೈದಪ್ಪ ತಂ/ಹಣಮಂತ ಮರೆಪ್ಪ ತಂ/ ನರಸಪ್ಪ
ಇನ್ನು ಹಲವಾರು ಜನರ ಮನೆಗಳು ಜಲಾವೃತಗೊಂಡಿವೆ.

ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಸಮಸ್ಯೆಯನ್ನು ಪರಿಹಾರ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here