ನಿಮಗೆ ಕೊರೋನಾ ಲಕ್ಷಣಗಳಿದ್ಯಾ..? ಹಾಗಿದ್ದರೇ ಏನ್ ಮಾಡಬೇಕು ಅಂತ ಈ ಸುದ್ದಿ ಓದಿ.!

0

ಇಂದು ಕೊರೋನಾ ಸೋಂಕಿಗೆ ಆಯುರ್ವೇದ ಹಾಗೂ ಯೋಗ ಚಿಕಿತ್ಸಾ ವಿಧಾನದ ವೇಳೆ ಯಾವೆಲ್ಲಾ ಕ್ರಮಗಳನ್ನು ಅನುಸರಿಸಬೇಕು ಎನ್ನುವ ಬಗ್ಗೆ ಕೇಂದ್ರ ಸರ್ಕಾರ ಎಸ್‌ಓಪಿ ಬಿಡುಗಡೆ ಮಾಡಿದೆ. ಕೊರೋನಾ ರೋಗದ ಲಕ್ಷಣಗಳಿಂದ ಬಳಲುತ್ತಿರುವವರು ಆಯುರ್ವೇದೌಷಧ ಮೂಲಕ, ಹೇಗೆ ರೋಗ ನಿರೋಧಕ ಶಕ್ತಿಯನ್ನು ಮನೆಯಲ್ಲಿಯೇ ಹೆಚ್ಚಿಸಕೊಳ್ಳಬಹುದು ಎಂಬುದಾಗಿ ಇಂದಿನ ಎಸ್‌ಓಪಿಯಲ್ಲಿ ತಿಳಿಸಲಾಗಿದೆ.

ಈ ಕುರಿತಂತೆ ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಮಾರ್ಗಸೂಚಿ ಕ್ರಮಗಳನ್ನು ಬಿಡುಗಡೆ ಮಾಡಿದ್ದು, ಕೊರೋನಾ ಸೋಂಕಿನ ಸಂಕಷ್ಟದ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹಾಗೂ ಶ್ವಾಸಕೋಶದ ಸಮರ್ಪಕ ನಿರ್ವಹಣೆಯನ್ನು ಯೋಗ ಹಾಗೂ ಆಯುರ್ವೇದ ಔಷಧಗಳ ಮೂಲಕ ಹೇಗೆ ಮಾಡಬಹುದು ಎಂಬುದಾಗಿ ತಿಳಿಸಲಾಗಿದೆ. ಈ ಕೆಳಗಿನ ಶಿಷ್ಟಾಚಾರದ ನಿಯಮಗಳ ಪಾಲನೆ ಮೂಲಕ ಕೊರೋನಾ ಸಂಕಷ್ಟದ ವಿರುದ್ಧ ಹೋರಾಡುವಂತೆ ತಿಳಿಸಲಾಗಿದೆ.

ರೋಗಲಕ್ಷಣ ರಹಿತ ಅಥವಾ ಲಘು ಲಕ್ಷಣವಿರುವ ಸೋಂಕಿತರಿಗೆ

1. ಉಗುರು ಬೆಚ್ಚಗಿನ ನೀರಿಗೆ ಚಿಟಿಕೆ ಅರಿಶಿಣ ಹಾಗೂ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸುವುದು. ತ್ರಿಫಲದೊಂದಿಗೆ ಕುದಿಸಿದ ಉಗುರು ಬೆಚ್ಚಗಿನ ನೀರಿನಿಂದಲೂ ಬಾಯಿ ಮುಕ್ಕಳಿಸಬಹುದು.
2. ಮೂಗಿನ ಹೊಳ್ಳೆಗಳಿಗೆ ತೆಂಗಿನೆಣ್ಣೆ ಅಥವಾ ಎಳ್ಳೆಣ್ಣೆ ಹಚ್ಚಿಕೊಳ್ಳಿ. ದಿನಕ್ಕೆ ಒಮ್ಮೆ ಅಥವಾ ಎರಡು ಸಲ ದನದ ತುಪ್ಪವನ್ನೂ ಮೂಗಿಗೆ ಹಚ್ಚಿಕೊಳ್ಳಬಹುದು.
3. ಜೀರಿಗೆ, ಪುದಿನಾ ಎಲೆ ಅಥವಾ ಯುಕಾಲಿಪ್ಟಸ್​ ಆಯಿಲ್​ ಬೆರೆಸಿದ ಬಿಸಿನೀರಿನ ಹಬೆಯನ್ನು ದಿನಕ್ಕೊಮ್ಮೆ ತೆಗೆದುಕೊಳ್ಳುವುದು.
4. ಬರೀ ಬಿಸಿನೀರು ಇಲ್ಲವೆ ಶುಂಠಿ, ಕೊತ್ತಂಬರಿ ಅಥವಾ ಜೀರಿಗೆ ಹಾಕಿ ಕುದಿಸಿದ ನೀರನ್ನು ಕುಡಿಯುತ್ತಿರಿ.
5. ಅರಿಶಿಣ ಬೆರೆಸಿದ ಹಾಲನ್ನು ರಾತ್ರಿ ಕುಡಿಯಿರಿ. ಅಜೀರ್ಣ ಸಮಸ್ಯೆ ಇದ್ದರೆ ಬೇಡ.
6. ಆಯುಷ್​ ಕಧಾ ಅಥವಾ ಕ್ವಾಥ್ ದಿನಕ್ಕೊಮ್ಮೆ ಕುಡಿಯಿರಿ.

ಗಂಭೀರ ಲಕ್ಷಣಗಳಿದ್ದಲ್ಲಿ

1. ಜ್ವರ, ಮೈಕೈ ನೋವು, ತಲೆನೋವು: ನಗರಾದಿ ಕಷಾಯ 20 ಮಿ.ಲೀ.ನಂತೆ ದಿನಕ್ಕೆರಡು ಸಲ ಕುಡಿಯಿರಿ.
2. ಕೆಮ್ಮು: ಜೇನುತುಪ್ಪದೊಂದಿಗೆ ಸೀತಾಫಲಾದಿ ಚೂರ್ಣವನ್ನು ದಿನಕ್ಕೆ 3 ಸಲ ಸೇವಿಸಿ.
3. ರುಚಿ ಇಲ್ಲದಿರುವುದು ಹಾಗೂ ಗಂಟಲು ಕೆರೆತ: ವ್ಯೋಷಾದಿ ವಾಟಿ ಗುಳಿಗೆಗಳನ್ನು 1 ಅಥವಾ 2 ಚೀಪುವುದು.
4. ಸುಸ್ತು: ಹತ್ತು ಗ್ರಾಂ ಚ್ಯವನಪ್ರಾಶವನ್ನು ಉಗುರು ಬೆಚ್ಚಗಿನ ನೀರು ಅಥವಾ ಹಾಲಿನಲ್ಲಿ ಬೆರೆಸಿ ದಿನಕ್ಕೊಮ್ಮೆ ಸೇವಿಸಿ.
5. ಹೈಪಾಕ್ಸಿಯಾ (ಆಮ್ಲಜನಕ ಕೊರತೆ): ಹತ್ತು ಗ್ರಾಂ ವಾಸವಲೇಹ ಬಿಸಿನೀರಿನಲ್ಲಿ ಹಾಕಿ ಸೇವಿಸಿ.
6. ಅತಿಸಾರ: ಗುಟಜ ಘನ ವಾಟಿ, 500 ಮಿ.ಗ್ರಾಂ. ಗುಳಿಗೆಯನ್ನು ದಿನಕ್ಕೆ ಮೂರು ಸಲ ಸೇವಿಸಿ.
7. ಉಸಿರಾಟದ ಸಮಸ್ಯೆ: ಹತ್ತು ಮಿ.ಲೀ. ಕನಕಸವವನ್ನು ಅಷ್ಟೇ ನೀರಿನಲ್ಲಿ ಹಾಕಿ ದಿನಕ್ಕೆ ಎರಡು ಸಲ ಸೇವಿಸಿ.

LEAVE A REPLY

Please enter your comment!
Please enter your name here