ಕೊರೋನಾ ಮಹಾಮಾರಿ ಜೀವ ಜೀವನವನ್ನು ಕಿತ್ತುಕೊಳ್ಳುತ್ತಿದೆ. ಅದೆಷ್ಟೋ ಜನ ಕೆಲಸವಿಲ್ಲದೇ ಬೀದಿಗೆ ಬಿದ್ದಿದ್ದಾರೆ. ಇದರುವ ಕೆಲಸವನ್ನೂ ಬಿಟ್ಟು ಮನೆಯಲ್ಲಿ ಕೈಕಟ್ಟಿ ಕುಳಿತುಕೊಳ್ಳುವ ಸ್ಥಿತಿ ಬಂದೊದಗಿದೆ.
ಕೊರೋನಾದಿಂದಾಗಿ ಅನೇಕರು ಬೀದಿಗೆ ಬಿದ್ದ ಪರಿನಾಮ ಸರ್ಕಾರ ಅನೇಕ ಯೋಜನೆಗಳನ್ನು ಜನರಿಗಾಗಿ ಇದಿಗ ನಿರುದ್ಯೋಗಿ ಮಹಿಳಯರಿಗೆ ಸಹಾಯ ಮಾಡುತ್ತಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ 18 ವರ್ಷದಿಂದ 55 ವರ್ಷದೊಳಗೆ ವಯೋಮಿತಿ ಇರುವ ಆಸಕ್ತ ನಿರುದ್ಯೋಗಿ ಮಹಿಳೆಯರಿಗೆ ಸ್ವ ಉದ್ಯೋಗಕ್ಕಾಗಿ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ
ಸ್ವ ಉದ್ಯೋಗ ಕೈಗೊಳ್ಳಲು 3 ಲಕ್ಷಗಳ ವರೆಗೆ ಬ್ಯಾಂಕ್ ಸಾಲ ಮತ್ತು ನಿಗಮದಿಂದ ಎಸ್.ಸಿ ಹಾಗೂ ಎಸ್.ಟಿ ಮಹಿಳೆಯರಿಗೆ ಶೇಕಡ 50 ರಷ್ಟು ಸಾಲ ನೀಡಲಾಗುತ್ತದೆ
ಸಾಮಾನ್ಯ ವರ್ಗದ (ವಿಧವೆಯರು,ಸಂಕಷ್ಟಕ್ಕೊಳಗಾದ ಮಹಿಳೆಯರು, ಅಂಗವಿಕಲರು), ಮಹಿಳೆಯರಿಗೆ ಶೇಕಡ 30ರಷ್ಟು ಸಹಾಯಧನವನ್ನು ನೀಡಲಾಗುತ್ತದೆ
ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯನ್ನು ಸಂರ್ಪಕಿಸಿ ಅರ್ಜಿ ಪಡೆದು ಅಕ್ಟೋಬರ್ 1 ರಿಂದ ಅರ್ಜಿ ಸಲ್ಲಿಸಬಹುದಾಗಿದೆ
ಅಕ್ಟೋಬರ್ 23 ಕೊನೆಯ ದಿನಾಂಕವಾಗಿರುತ್ತದೆ
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರ ಕಛೇರಿಯನ್ನು ಸಂರ್ಪಕಿಸಬಹುದಾಗಿದೆ
ನಿರುದ್ಯೋಗಿ ಮಹಿಳೆಯರಿಗೆ ಸ್ವ ಉದ್ಯೋಗಕ್ಕಾಗಿ ಸಹಾಯಧನ
ನಿರುದ್ಯೋಗಿ ಮಹಿಳೆಯರಿಗೆ ಸ್ವ ಉದ್ಯೋಗಕ್ಕಾಗಿ ಸಹಾಯಧನ