ಉತ್ತರ ಪ್ರದೇಶದ ದಲಿತ ಯುವತಿ ಮನೀಷಾ ವಾಲ್ಮೀಕಿ ಅತ್ಯಾಚಾರ, ಹತ್ಯೆ ಘಟನೆಗೆ ಖಂಡನೆ- ವಾಲ್ಮೀಕಿ ಸಮಯದಾಯದ ಸ್ವಾಭೀಮಾನಿ ಶ್ರೀ ರಾಮುಲು ಯಾಕೆ ಮಾತನಾಡ್ತಿಲ್ಲಾ- ರಮೇಶ್ ಜಾರಕಿಹೊಳಿ ಯಾಕೆ ಮಾತನಾಡುತ್ತಿಲ್ಲಾ. ಯಾರು ಮಾತನಾಡದೇ ಇದ್ರೂ ಶ್ರೀ ರಾಮುಲು, ರಮೇಶ್ ಜಾರಕಿಹೊಳಿ ಮಾತನಾಡುತ್ತಾರೆ ಅಂದುಕೊಂಡಿದ್ದೆ. ಆದರೆ ಮಾತನಾಡಿಲ್ಲಾ ಯಾಕೆ ಎಂದು ಉಗ್ರಪ್ಪ ಪ್ರಶ್ನೆ ಮಾಡಿದ್ದಾರೆ.
ನಿರ್ಭಯಾ ಪ್ರಕರಣದಲ್ಲಿ ಬಾಯಿ ಬಡಿದುಕೊಳ್ಳುತಿದ್ದ ಬಿಜೆಪಿಯವರು ಮನೀಷಾ ಪ್ರಕರಣದಲ್ಲಿ ಮೌನ ವಹಿಸುತ್ತಿರುವುದು ಏಕೆ ? ರಾಜ್ಯದ ಸಿಎಂ ಯಡಿಯೂರಪ್ಪ RTGS ಮೂಲಕ ಲಂಚ ಪಡೆಯುತ್ತಿದ್ದಾರೆ. ಈ ಹಿಂದೆ ಚೆಕ್ ಮೂಲಕ ಪಡೆದಿದ್ದರು. ಸಾವಿರಾರು ಕೋಟಿ ರೂ.ಗಳನ್ನು ಕಿಕ್ ಬ್ಯಾಕ್ ಪಡೆದು ಸಿಎಂ ಯಡಿಯೂರಪ್ಪ ಅವರು ಭೂಸುಧಾರಣೆ, ಎಪಿಎಂಸಿ ಕಾಯ್ದೆಗಳನ್ನು ತಿದ್ದುಪಡಿ ಮಾಡಿದ್ದಾರೆ.
KPCC ಅಧ್ಯಕ್ಷ ಡಿಕೆ. ಶಿವಕುಮಾರ್ ಅವರ ಮನೆ ಮೇಲೆ CBI ದಾಳಿ ಖಂಡನೀಯ- ಉಪ ಚುನಾವಣೆ ಸಮಯದಲ್ಲಿ ಈ ದಾಳಿ ಸರಿಯಲ್ಲಾ. ಕೋವಿಡ್ ವಿಚಾರದಲ್ಲೂ ಭ್ರಷ್ಟಾಚಾರ ನಡೆದಿದೆ ಎಂದು ಉಗ್ರಪ್ಪ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.