ನೀವೂ ಮೊಬೈಲ್ ಬಳಸುತ್ತೀರಾ? ಮಾತನಾಡುತ್ತಲೇ ಪ್ರಾಣ ಹೋದೀತು ಜೋಕೆ!

0

ಉಪ್ಪಿನಂಗಡಿ: ಹಲವರಿಗೆ ಮೊಬೈಲ್​ ಕೈನಲ್ಲಿದ್ದರೆ ಸಾಕು ಲೋಕವನ್ನೆಲ್ಲ ಮರೆತು ಬಿಡುತ್ತಾರೆ. ಗೇಮ್​, ಸೆಲ್ಫಿ, ಚಾಟಿಂಗ್​ ಗೀಳು ಹತ್ತಿಸಿಕೊಂಡವರು ಲೆಕ್ಕವಿಲ್ಲದಷ್ಟು ಮಂದಿ. ಈ ನಡುವೆ ಇದೇ ಗೀಳಿಗೆ ಹಲವರ ಪ್ರಾಣ ಹಾನಿಯೂ ಸಂಭವಿಸಿದೆ. ಇದೀಗ ಮೊಬೈಲ್​ನಲ್ಲಿ ಮಾತನಾಡುತ್ತ ಮೈಮರೆತ ಯುವಕನೊಬ್ಬ 15 ಅಡಿ ಎತ್ತರದಿಂದ ಬಿದ್ದು ಪ್ರಾಣ ಬಿಟ್ಟಿದ್ದಾನೆ.

ಶಿಕಾರಿಪುರ ತಾಲೂಕಿನ ಮದಗಹಾರನಹಳ್ಳಿ ನಿವಾಸಿ ಹೊನ್ನಪ್ಪ ಬಿನ್​ ಫಕೀರಪ್ಪ (30) ಮೃತ.  

ಉಪ್ಪಿನಂಗಡಿ ಸಮೀಪದ ಕಣಿಯೂರು ಗ್ರಾಮದ ಮಾರುತಿಪುರದ ರೈಸ್​ಮಿಲ್​ನಲ್ಲಿ ಹೊನ್ನಪ್ಪ ಕೆಲಸ ಮಾಡುತ್ತಿದ್ದ. ಇದೇ ಕಟ್ಟಡದ ವಸತಿಯಲ್ಲಿ ವಾಸ್ತವ್ಯ ಹೊಂದಿದ್ದ ಯುವಕ ಬುಧವಾರ ರಾತ್ರಿ ಮೊಬೈಲ್​ನಲ್ಲಿ ಮಾತನಾಡುತ್ತಲೇ ದುರ್ಮರಣಕ್ಕೀಡಾಗಿದ್ದಾನೆ.

ಮಹಡಿಯ ದಂಡೆಯಲ್ಲಿ ಕುಳಿತು ಮೊಬೈಲ್​ನಲ್ಲಿ ಮಾತನಾಡುತ್ತಿದ್ದ. ಈ ವೇಳೆ ಮಾತನಾಡುವ ಗುಂಗಿನಲ್ಲೇ ಮೈಮರೆತ್ತಿದ್ದ ಆತ ಆಯತಪ್ಪಿ 15 ಅಡಿ ಕೆಳಕ್ಕೆ ಬಿದ್ದಿದ್ದಾನೆ. ಬಿದ್ದ ರಭಸಕ್ಕೆ ತೀವ್ರ ರಕ್ತಸ್ರಾವವಾಗಿ ಕೊನೆಯುಸಿರೆಳೆದಿದ್ದಾನೆ. ಉಪ್ಪಿನಂಗಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here