,ಸೆ.22(ಹಿ.ಸ): ಮಂಗಳೂರು ಉತ್ತರ ವಿಧಾನಸಭಾ ಶಾಸಕ ರಾದ ಡಾ. ವೈ. ಭರತ್ ಶೆಟ್ಟಿ ಯವರು ನೀರುಮಾರ್ಗ ಕೆಲರೈ ಪುನ್ಕೆದಡಿ ಕೂಡು ರಸ್ತೆ ಬಳಿ ಭೇಟಿ ನೀಡಿ ಶಾಶ್ವತ ಪರಿಹಾರ ಮಾಡುವಂತೆ ಸೂಕ್ತ ಕ್ರಮ ಕೈಗೊಳ್ಳಲು ಆದೇಶ ನೀಡಿದರು.
ಶಾಸಕರು ಸ್ಥಳೀಯರೊಂದಿಗೆ ಚರ್ಚಿಸಿ ರಸ್ತೆ, ಚರಂಡಿ ಹಾಗೂ ತಡೆಗೋಡೆ ನಿರ್ಮಾಣ ಅನಿವಾರ್ಯವಾಗಿದ್ದು ರಚನೆಗೆ ಯೋಜನೆ ರೂಪಿಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಆದೇಶಿಸಿದರು.
ಈ ಸಂಧರ್ಭ ದಲ್ಲಿ ಮಂಗಳೂರು ಉತ್ತರ ಮಂಡಲ ಪ್ರಧಾನ ಕಾರ್ಯದರ್ಶಿ ಸಂದೀಪ್ ಪಚ್ಚನಾಡಿ, ನೀರುಮಾರ್ಗ ಮಹಾಶಕ್ತಿಕೇಂದ್ರ ಅಧ್ಯಕ್ಷರಾದ ಸಚಿನ್ ಹೆಗ್ಡೆ , ಶಕ್ತಿ ಕೇಂದ್ರ ಪ್ರಮುಖರಾದ ಸಂಜೀವ ಮಜಲು,ಯಶ್ವಿನ್ ಎನ್ ಕುಂದರ್,ಶಕ್ತಿ ಕೇಂದ್ರ ಸಹ ಪ್ರಮುಖ ನಾಗೇಶ್, ಬೂತ್ ಅಧ್ಯಕ್ಷರಾದ ತುಕರಾಮ್, ಗೋಪಾಲ ಪೂಜಾರಿ ಸ್ಥಳಿಯರಾದ ಚೆನ್ನಪ್ಪ ಪೂಜಾರಿ ಸಾಗರ್ ಮುಂತಾದವರು ಉಪಸ್ಥಿತರಿದ್ದರು.
ಹಿಂದುಸ್ಥಾನ್ ಸಮಾಚಾರ/ಸು.ಕು/ಎಂ.ಎಸ್/ಯ.ಮ