ನೋಡುಗರನ್ನು ಬೆಚ್ಚಿಬೀಳಿಸುತ್ತೆ ಸಿಂಹದ ಈ ವಿಡಿಯೋ

0

ಕಗ್ಗತ್ತಲೆಯ ದಾರಿ ನಡುವೆ ಸ್ಪಾಟ್ ಲೈಟ್‌ನಂತೆ ಬೈಕ್ ಒಂದರ ಹೆಡ್ ಲೈಟ್‌ನ ಬೆಳಕು ಬಿದ್ದಿದೆ. ಅನತಿ ದೂರದಲ್ಲಿ ಅತಿ ಗಾಂಭೀರ್ಯದಿಂದ ಸಿಂಹವೊಂದು ಮಲಗಿದೆ.

ಬೆಳಕಿಗೂ, ಜನರಿಗೂ ಬೆದರದೇ ಅದು ನಿಧಾನವಾಗಿ ತನ್ನ ಮುಖ ತಿರುಗಿಸಿ ನೋಡುವ ಪರಿ ಎಂಥ ಧೈರ್ಯವಂತರ ಎದೆಯಲ್ಲೂ ಒಮ್ಮೆ ಭಯದ ನೆರಳು ಮೂಡುವಂತೆ ಮಾಡುತ್ತದೆ. ಇದ್ಯಾವ ಭಯಾನಕ ನಿಗೂಢ ಚಿತ್ರದ ಕಥೆಯಲ್ಲ. ರಸ್ತೆ ಮಧ್ಯೆ ಮಲಗಿದ ಸಿಂಹವೊಂದರ ಸುದ್ದಿ.

ಗುಜರಾತ್‌ನ ಗಿರ್ ಪ್ರದೇಶದ ಅರಣ್ಯದ ದಾರಿಯಲ್ಲಿ ರಾತ್ರಿ ಸಿಂಹವೊಂದು ಮಲಗಿರುವ ದೃಶ್ಯವನ್ನು ಅಲ್ಲಿನ ಫಾರೆಸ್ಟ್ ಗಾರ್ಡ್ ಮಹೇಶ ಸೊಂದರ್ವಾ ವಿಡಿಯೋ ಮಾಡಿದ್ದಾರೆ. 32 ಸೆಕೆಂಡ್‌ನ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗಿರ್ ಪೂರ್ವ ಪ್ರಾಂತ್ಯದ ಡಿಸಿಎಫ್ ಆಗಿರುವ ಐಎಫ್‌ಎಸ್ ಅಧಿಕಾರಿ ಡಾ.ಅಂಶುಮನ್ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ‘ನನ್ನ ಸಿಂಹ ಹೃದಯದ ನೌಕರ ವಿನಂತಿಸಿದ-ನಾನು ಇಡೀ ದಿನ ನಿನ್ನ ಸೇವೆಯಲ್ಲಿ ಇದ್ದೇನೆ. ಈಗ ನನಗೆ ಹೋಗಲು ಬಿಡು ಎಂದು. ಸಿಂಹ ಒಪ್ಪಿಕೊಂಡಿತು’ ಎಂದು ಕ್ಯಾಪ್ಶನ್ ನೀಡಿದ್ದಾರೆ.

LEAVE A REPLY

Please enter your comment!
Please enter your name here