ಸಿಂದಗಿ ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಡಾ. ಆರ್.ಆರ್.ವಾರದ ಅವರ ನುಡಿನಮನ ಕಾರ್ಯಕ್ರಮ ಜರುಗಿತು.
ಸಿಂದಗಿ- ಕನ್ನಡ ಸಾಹಿತ್ಯ ಪರಿಷತ್ತು ಭವನಕ್ಕೆ ಭೂದಾನ ಮಾಡಿದ ಡಾ.ಆರ್.ಆರ್.ವಾರದ ಅವರು ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಸದಾ ಸಕ್ರೀಯರಾಗಿದ್ದುಕೊಂಡೆ ವೈದಕೀಯ ಲೋಕದ ದೃವತಾರೆಯಾಗಿದ್ದರು ಎಂದು ಹಿರಿಯ ಸಾಹಿತಿ ಡಾ.ಎಂ.ಎಂ.ಪಡಶೆಟ್ಟಿ ಹೇಳಿದರು.
ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಡಾ. ಆರ್.ಆರ್.ವಾರದ ಅವರ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಡಾ.ವಾರದ ಅವರು ಅಂತರಂಗದ ಕಾಳಜಿಯನ್ನು ಧಾನ-ಧರ್ಮಗಳ ಮೂಲಕ ವ್ಯಕ್ತಪಡಿಸುತ್ತಿದ್ದರು ಎಂದರು.
ನಿವೃತ್ತ ಪ್ರಾಂಶಿಪಾಲ ಡಾ.ಸಿ.ಕೆ.ಕಟ್ಟಿ ಮಾತನಾಡಿ, ಸರಳ ಜೀವಿಯಾಗಿದ್ದ ವೈಧ್ಯರು ವಚನೋತ್ಸವಗಳಲ್ಲಿ ಭಾಗವಹಿಸಿ ಶ್ರವಣಸುಖ ಅನುಭವಿಸುತ್ತಿದ್ದರು. ಯಾವುದೇ ವೇದಿಕೆ ಭಯಸದೇ ಸದಾ ಪ್ರೇಕ್ಷಕರಾಗಿಯೇ ಕಾರ್ಯಕ್ರಮ ವಿಕ್ಷಿಸುತ್ತಿದ್ದರು. ಅಂತಹ ಸರಳೀವಿ ಸಿಗುವುದು ವಿರಳ ಎಂದು ಹೇಳಿದರು.
ನಿವೃತ್ತ ಪ್ರಾಧ್ಯಾಪಕ ಪಿ.ಎಂ.ಮಡಿವಾಳರ ಮಾತನಾಡಿ, ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದ ವಾರದ ಡಾಕ್ಟರರು ಸಾಯಿಬಾಬನ ಭಕ್ತರಾಗಿದ್ದುಕೊಂಡು ಪುಟ್ಟಪರ್ತಿ ಸಾಯಿ ಮಂದಿರದಲ್ಲಿ ಪ್ರತಿವರ್ಷವು ಹಲವು ದಿನಗಳ ಸೇವೆ ಸಲ್ಲಿಸುತ್ತಿದ್ದರು ಅಂತಹ ಸರಳ ಜೀವಿಯ ಜೀವನ ನಮಗೆಲ್ಲ ಮಾರ್ಗದರ್ಶನವಾಗಬೇಕು ಎಂದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅದ್ಯಕ್ಷ ಸಿದ್ದಲಿಂಗ ಚೌಧರಿ ಮಾತನಾಡಿದರು. ಪತ್ರಕರ್ತರ ಸಂಘದ ಅದ್ಯಕ್ಷ ಆನಂದ ಶಾಬಾದಿ, ಪಂಡಿತ ಯಂಪೂರೆ, ರಾ.ಸಿ.ವಾರದ, ಬಸವರಾಜ ಅಗಸರ, ಅಶೋಕ ಬಿರಾದಾರ, ಗುಂಡಣ್ಣ ಕುಂಬಾರ, ಪವನ ಕುಲಕರ್ಣಿ, ಅಶೋಕ ವರದ, ಡಾ. ಅಮೀತ ವಾರದ, ಸಿದ್ದಲಿಂಗ ಕಿಣಗಿ, ಮಹಾಂತೇಶ ನೂಲಾನವರ, ಪ್ರದೀಪ ಕತ್ತಿ, ದೈಹಿಕ ಶಿಕ್ಷಕ ಮೋರೆ ಸೇರಿದಂತೆ ಹಲವರಿದ್ದರು.
Home ಇತ್ತೀಚಿನ ಸುದ್ದಿ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಡಾ. ಆರ್.ಆರ್.ವಾರದ ಅವರ ನುಡಿನಮನ ಕಾರ್ಯಕ್ರಮ ಜರುಗಿತು..!