ಪಂಜಾಬಿನಲ್ಲಿ ಸೆಕ್ಷನ್ 144 ಹೇರಲು ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಆದೇಶ

0

ಪಂಜಾಬ್ ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವಂತೆಯೇ ಸೆಕ್ಷನ್ 144ರ ಅಡಿಯಲ್ಲಿ ನಾಲ್ಕು ಜನರಿಗಿಂತ ಹೆಚ್ಚು ಜನ ಒಂದೆಡೆ ಸೇರದಂತಹ ನಿರ್ಬಂಧವನ್ನು ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಜಾರಿಗೊಳಿಸಿದ್ದಾರೆ.

ವಿವಾಹ ಮತ್ತು ‘ಬೋಗ್’ ಸಮಾರಂಭಗಳಿಗೆ ನಿರ್ಬಂಧ ಆದೇಶದಿಂದ ವಿನಾಯಿತಿ ನೀಡಲಾಗಿದೆ.ನಿಯಮ ಉಲ್ಲಂಘಿಸುವ ಆಯೋಜಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಕೊರೋನಾವೈರಸ್ ಹೆಚ್ಚಾಗುತ್ತಿರುವಂತೆ ಆಗಸ್ಟ್ 31ರವರೆಗೂ ಲಾಕ್ ಡೌನ್ ನಿರ್ಬಂಧ ಘೋಷಿಸಿದ ಒಂದು ದಿನದ ನಂತರ ಹೊಸದಾದ ನಿರ್ಬಂಧವನ್ನು ಕ್ಯಾಪ್ಟನ್ ಅಮರೀಂದರ್ ಸಿಂಗ್ ಪ್ರಕಟಿಸಿದ್ದಾರೆ.

ಪಂಜಾಬಿನ ಎಲ್ಲಾ 167 ನಗರಗಳು ಮತ್ತು ಪಟ್ಟಣಗಳಲ್ಲಿ ರಾತ್ರಿ ಕರ್ಫ್ಯೂವನ್ನು ಎರಡು ಗಂಟೆಗಳ ಅವಧಿ ಹೆಚ್ಚಿಸಿ ಗುರುವಾರ ಪಂಜಾಬ್ ಸರ್ಕಾರ ಆದೇಶ ಹೊರಡಿಸಿತ್ತು. ಕೋವಿಡ್-19 ಸಾಂಕ್ರಾಮಿಕ ನಿಯಂತ್ರಣ ಹಾಗೂ ರಾಜ್ಯದ ಜನರ ಪ್ರಾಣ ಉಳಿವಿಗೆ ಅಗತ್ಯವಾದರೆ ಆಗಸ್ಟ್ 31ರ ನಂತರವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ರಾಜಕೀಯ ಪಕ್ಷಗಳು,ಪ್ರತಿಭಟನೆ, ಸಭೆ, ಸಮಾರಂಭ ನಡೆಸದಂತೆ ಮುಖ್ಯಮಂತ್ರಿ ಮನವಿ ಮಾಡಿಕೊಂಡಿದ್ದಾರೆ.

ಒಂದು ವೇಳೆ 144 ಸೆಕ್ಷನ್ ಉಲ್ಲಂಘಟನೆ ಕಂಡುಬಂದಲ್ಲಿ, ಜನರನ್ನು ಸೇರಿಸುವ ಅಥವಾ ಮಾಸ್ಕ್ ಇಲ್ಲದೆ ಜನರು ಒಂದೆಡೆ ಸೇರುವಂತೆ ಮಾಡುವ ಆಯೋಜಕರನ್ನು ಬಂಧಿಸಲಾಗುವುದು ಎಂದು ಅವರು ಅಧಿಕೃತವಾಗಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here