ಪಟ್ಟಣಗಳಲ್ಲಿ ನಡೆಯುವ ಮನೆಗಳ್ಳತನ ಹಾಗೂ ಅಂಗಡಿಗಳಲ್ಲಿ ನಡೆಯುವ ಕಳ್ಳತನವನ್ನು ತಡೆಯುವ ಕುರಿತು

0

ಪಟ್ಟಣಗಳಲ್ಲಿ ನಡೆಯುವ ಮನೆಗಳ್ಳತನ ಹಾಗೂ ಅಂಗಡಿಗಳಲ್ಲಿ ನಡೆಯುವ ಕಳ್ಳತನವನ್ನು ತಡೆಯುವ ಕುರಿತು ಮಂಡ್ಯ ಜಿಲ್ಲೆಯ ರಾಮದಾಸ್ ರೆಸ್ಟೋರೆಂಟ್ ನ ಸುಲೋಚನಮ್ಮ ಸಭಾಂಗಣದಲ್ಲಿ ಕೆ.ಆರ್.ಪೇಟೆ ಪಟ್ಟಣ ಪೋಲಿಸರ ನೇತೃತ್ವದಲ್ಲಿ ನಡೆಯಿತು.

ಅಂಗಡಿಗಳಲ್ಲಿ ಕ್ಯಾಮರಾ ಬಳಸಿ ಪೋಲಿಸ್ ಇಲಾಖೆಯ ಕಂಪ್ಯೂಟರ್‌ ವಿಭಾಗಕ್ಕೆ ಜೋಡಣೆಯಾಗಿರುವ ಆಫ್ ಮೂಲಕ ಕಳ್ಳತನವನ್ನು ತಡೆಗಟ್ಟಬಹುದು.

ಕಳ್ಳರು ಬಾಗಿಲು ಮುರಿದು ಒಳನುಗ್ಗುತ್ತಿದ್ದಂತೆ ಕ್ಯಾಮರಾವು ಸೆನ್ಸಾರ್ ಮಾಡಿ ಪೋಟೋ ತೆಗೆದು ಪೋಲಿಸರಿಗೆ ಕಳಿಸಿ ಬೀಪ್ ಶಬ್ದ ಮಾಡುತ್ತದೆ.

ಆಗ ಜಾಗೃತರಾಗುವ ಪೋಲಿಸರು ನೈಟ್ ಬೀಟ್ ಮೂಲಕ ಕಳ್ಳತನ ನಡೆಯುತ್ತಿರುವ ಮನೆಗೆ ಹೋಗಿ ಕಳ್ಳರನ್ನು ಮಾಲು ಸಮೇತ ಹಿಡಿದು ಶಿಕ್ಷಿಸಲು ನೆರವಾಗುತ್ತದೆ ಎಂದು ಪಟ್ಟಣ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಬಿ.ಪಿ.ಬ್ಯಾಟರಾಯಗೌಡ ವರ್ತಕರುಗಳಿಗೆ ಮಾಹಿತಿ ನೀಡಿದರು.

ಸಬ್ ಇನ್ಸ್ ಪೆಕ್ಟರ್ ತೊಳಜನಾಯಕ್, ಸಿಪಿಐ ಕೆ.ಎನ್.ಸುಧಾಕರ್ ಹಾಗೂ
ಕೃಷ್ಣರಾಜಪೇಟೆ ಪಟ್ಟಣದ ವರ್ತಕರು ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದರು.

ಮಂಡ್ಯದಿಂದ ಆಗಮಿಸಿದ್ದ ಕಂಪ್ಯೂಟರ್ ಮತ್ತು ಕ್ಯಾಮರಾ ತಜ್ಞ ದಿನೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಕ್ಯಾಮರ ಅಳವಡಿಕೆ ಹಾಗೂ ಸುಬಾಹು ಆಫ್ ಬಗ್ಗೆ ಅಗತ್ಯ ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here