ಪಟ್ಟಣದ ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ. ಪ.ಪೂ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಸದ್ಭಾವನಾ ದಿನಾಚರಣೆಯಲ್ಲಿ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು.

0

ಸಿಂದಗಿ : ಭಾರತವು ಒಂದು ಪುರಾತನ ದೇಶ, ಆದರೆ ಯುವರಾಷ್ಟ್ರವಾಗಿದೆ. ದೇಶದೆಲ್ಲೆಡೆ ಯುವ ಜನರಿದ್ದಾರೆ. ಆದರೆ ನಾವು ಅಸಹಿಷ್ಣುಗಳಾಗಿದ್ದೇವೆ ಎಲ್ಲರೂ ಪ್ರೀತಿ, ವಿಶ್ವಾಸದಿಂದ ಸೌಹರ್ಧತೆಯಿಂದ ಬದುಕಬೇಕು.ಜಾತಿ ಭೇಧ ಭಾವ ಮಾಡಬಾರದು ಎಂದು ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಹೇಳಿದರು.
ಪಟ್ಟಣದ ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ. ಪ.ಪೂ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಸದ್ಭಾವನಾ ದಿನಾಚರಣೆಯಲ್ಲಿ ಮಾತನಾಡಿ, ದಿ. ಮಾಜಿ ಪ್ರಧಾನಿ ರಾಜೀವಗಾಂಧಿ ಜನ್ಮ ದಿನಾಚರಣೆ ಅಂಗವಾಗಿ ಸದ್ಭಾವನಾ ದಿನಾಚರಣೆ ಆಚರಿಸಲಾಗುತ್ತದೆ ಅವರು ಜೀವಿತ ಕಾಲದಲ್ಲಿ ಮಾಡಿದ ಅಭಿವೃದ್ಥಿ ಕಾರ್ಯಗಳು ಹಾಗೂ ರಾಷ್ಟ್ರೀಯ ಏಕತೆಗಾಗಿ ಹಲವಾರು ಕಾರ್ಯಕ್ರಮ ಹಮ್ಮಿಕೊಂಡು ಸಲ್ಲಿಸಿದ ಸಾಧನೆಯ ಪ್ರತೀಕವಾಗಿ ಈ ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ. ಭಾರತವು ಬಲಿಷ್ಟ ಸ್ವತಂತ್ರ ಹಾಗೂ ಸ್ವಾಭಿಮಾನದ ಹಾಗೂ ಮಾನವ ಜನಾಂಗದ ಸೇವೆಯಲ್ಲಿ ಇಡೀ ವಿಶ್ವದಲ್ಲಿ ಎಲ್ಲ ರಾಷ್ಟ್ರಗಳಿಗಿಂತಲೂ ಮುಂಚುಣಿಯಲ್ಲಿರಬೇಕೆಂಬ ದಿ. ಮಾಜಿ ಪ್ರಧಾನಿ ರಾಜೀವಗಾಂಧಿ ಕನಸನ್ನು ನಾವೆಲ್ಲರೂ ನನಸಾಗಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಸತೀಶ ಪಾಟೀಲ, ಅರ್.ಬಿ.ಹೊಸಮನಿ, ಬಿ.ಎನ್ .ಬಿರಾದಾರ, ಎಂ.ಎಸ್.ಕಿರಣಗಿ, ಅರ್.ಸಿ.ಕಕ್ಕಳಮೆಲಿ, ಎಫ್.ಎ. ಹಾಲಪ್ಪನವರ, ಎ.ಆರ್.ಸಿಂದಗಿಕರ, ಎಸ್.ಪಿ.ಬಿರಾದಾರ, ಎಂ.ಎಸ್.ಅಜ್ಜಪ್ಪಾ, ಮುಕ್ಕಾಯಕ್ಕ ಕತ್ತಿ, ಎಸ್.ಎಸ್.ಚವ್ಹಾಣ, ಸಿದ್ದಲಿಂಗ ಕಿಣಗಿ, ಎ.ಬಿ.ಪಾಟೀಲ, ಎಸ್.ಎ.ಬಸರಕೋಡ, ರವಿ ಉಪ್ಪಾರ ಸೇರಿದಂತೆ ಹಲವರಿದ್ದರು.

ವರದಿ: ಮಹಾಂತೇಶ ನೂಲಾನವರ, ಸಿಂದಗಿ.

LEAVE A REPLY

Please enter your comment!
Please enter your name here