ಪಟ್ಟಣದ ಮೂಲಭೂತ ಸೌಲಭ್ಯಗಳಿಗಾಗಿ 3 ಕೋಟಿ ಕಾಮಗಾರಿಗೆ ಸಚಿವರಿಂದ ಚಾಲನೆ

0

ಗುಡಿಬಂಡೆ ; ರಾಜ್ಯದಲ್ಲಿ ಅತೀ ಹಿಂದುಳಿದ ಹಾಗೂ ಚಿಕ್ಕ ತಾಲ್ಲೂಕು ಮತ್ತು ಕೇಂದ್ರವಾಗ ಗುಡಿಬಂಡೆ ಪಟ್ಟಣದಲ್ಲಿ ಮೂಲಭೂತ ಸೌಲಭ್ಯಕ್ಕಾಗಿ ಎಸ್.ಎಫ್.ಸಿ ವಿಶೇಷ ಅನುದಾನದಲ್ಲಿ $ 300 ಲಕ್ಷ ಮಂಜೂರಾತಿ ನೀಡಲಾಗಿದ್ದು 6 ಪ್ಯಾಕೇಜಗಳಲ್ಲಿ 90 ದಿನಗಳ ಆವಧಿಯಲ್ಲಿ ಕಾಮಗಾರಿ ಕೆಲಸ ಪೂರ್ಣಗೊಳ್ಳಲಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಕರ ತಿಳಿಸಿದರು.

ಅವರು ಬುಧುವಾರ 8 ಗಂಟೆಗಳ ತಡವಾಗಿ ರಾತ್ರಿ 8 ಗಂಟೆಗೆ ಪಟ್ಟಣಕ್ಕೆ ಅಗಮಿಸಿ ಪಟ್ಟಣದ ಅಂಬೇಡ್ಕರ ನಗರದಲ್ಲಿ ಕಾಮಗಾರಿ ಚಾಲನೆಗೆ ಗುದ್ದಲಿ ಪೊಜೆ ಮಾಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಈ ಅನುದಾನದಲ್ಲಿ ರಸ್ತೆ, ಚರಂಡಿ, ಮನೆ ನೀರು ಕೊಯ್ಲ, ಗ್ರಿಲ್ ಕಾಮಗಾರಿ, ಶುದ್ದ ಕುಡಿಯುವ ನೀರಿನ ಘಟಕಗಳ ನಿರ್ಮಾಣವಾಗಲಿದ್ದು ಉತ್ತಮ ಗುಣಮಟ್ಟದ ಕಾಮಗಾರಿಯನ್ನು ಮಾಡ ಬೇಕು ಎಂದು ಅಧಿಕಾರಿಗಳಿಗೆ ಹಾಗೂ ಕಾಮಗಾರಿ ಗುತ್ತಿಗೆದಾರರಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಎಂ.ಎಲ್.ಸಿ. ವೈ. ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ಅರ್. ಲತಾ, ಸಿಇಒ ಬಿ.ಫೌಜಿಯಾ ತರನುಮ್, ಎಸ್ಪಿ ಜಿ.ಕೆ.ಮಿಥುನ್ ಕುಮಾರ್,ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮಲಿಂಗಪ್ಪ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ವರಲಕ್ಷೀ, ಉಪಾಧ್ಯಕ್ಷ ಬೈರಾರೆಡ್ಡಿ, ತಹಶೀಲ್ದಾರ್ ಡಿ.ಹನುಮಂತರಾಪ್ಪ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ರಾಜಶೇಖರ್ ಅಧಿಕಾರಿಗಳು ಇದ್ದರು.
13 ಗುಡಿ 01 : ಗುಡಿಬಂಡೆ ಪಟ್ಟಣದ ಅಂಬೇಡ್ಕರ ನಗರದಲ್ಲಿ $ 3 ಕೋಟಿ ಕಾಮಗಾರಿಗೆ ಸಚಿವರು, ಶಾಸಕರು, ವಿದಾನ ಪರಿಷತ್ ಸದಸ್ಯರು ಅಧಿಕಾರಿಗಳು ಕಾಮಗಾರಿಗೆ ಚಾಲನೆ ನೀಡಿದರು.

ವರದಿ ಸತೀಶ್ ಬಾಬು.ಎ ಗುಡಿಬಂಡೆ ತಾಲೂಕು

LEAVE A REPLY

Please enter your comment!
Please enter your name here