ಪಠ್ಯಕ್ರಮದಿಂದ ಸಂಗೊಳ್ಳಿ ರಾಯಣ್ಣನವರ ಅಧ್ಯಯನವನ್ನು ತೆಗೆಯುವುದನ್ನು ಕೈಬಿಡಬೇಕೆಂದು ಸರಕಾರಕ್ಕೆ ಆಗ್ರಹ

0

ಪಠ್ಯಕ್ರಮದಿಂದ ಸಂಗೊಳ್ಳಿ ರಾಯಣ್ಣನವರ ಅಧ್ಯಯನವನ್ನು ತೆಗೆಯುವುದನ್ನು ಕೈಬಿಡಬೇಕೆಂದು ಸರಕಾರಕ್ಕೆ ಆಗ್ರಹ: ಲಿಂಗರಾಜ್ ಮಾಸ್ಟರ್.

ಜೇವರ್ಗಿ: ಕೋವಿಡ್ 19 ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ ಶೈಕ್ಷಣಿಕ ವರ್ಷದಲ್ಲಿನ ಪಠ್ಯಕ್ರಮದಲ್ಲಿ ಸಂಗೊಳ್ಳಿ ರಾಯಣ್ಣ ಟಿಪ್ಪು ಸುಲ್ತಾನ್ ರಾಣಿ ಅಬ್ಬಕ್ಕ ಮತ್ತು ಕಿತ್ತೂರಾಣಿ ಚೆನ್ನಮ್ಮ ನಂತವರ ಪಠ್ಯಪುಸ್ತಕದಲ್ಲಿರುವ ಅಧ್ಯಾಯವನ್ನು ತೆಗೆದು ಹಾಕಿರುವುದನ್ನು ಖಂಡಿಸುತ್ತೇನೆ ಎಂದು ಹೇಳಿದರು. ಮಾಹಾನ ವೀರರ ಕಥೆಗಳನ್ನು ತೆಗೆದುಹಾಕುವ ವಿಷಯವನ್ನು ಕೈಬಿಡಬೇಕೆಂದು ಸರ್ಕಾರಕ್ಕೆ ಲಿಂಗರಾಜ್ ಮಾಸ್ಟರ್ ಆಗ್ರಹಿಸಿದರು.

ಈ ಮಹಾನ್ ವ್ಯಕ್ತಿಗಳು ಸಮಸ್ತ ಸಮುದಾಯ ಹಾಗೂ ಯುವ ಪೀಳಿಗೆಗೆ ತಮ್ಮದೇಯಾದ ತ್ಯಾಗ-ಬಲಿದಾನ ದೇಶಪ್ರೇಮ ಶೌರ್ಯಗಳಿಂದ ಸರ್ವರಿಗೂ ಆದರ್ಶಪ್ರಾಯರಾಗಿರುತ್ತಾರೆ. ಇಂಥ ಮಹಾನ್ ವ್ಯಕ್ತಿಗಳ ನಡೆ-ನುಡಿ ಅನುಕರಣೆ ಇಂದಿನ ಶಾಲಾ ಮಕ್ಕಳು ಇಂಥ ಮಹಾನ್ ನಾಯಕರನ್ನು ಆದರ್ಶ ಪಾಲನೆ ಮಾಡುವುದು ಶಿಕ್ಷಕರು ಬೋಧನೆ ಮಾಡುತ್ತಾರೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ದಿನ ಸಂಗೊಳ್ಳಿ ರಾಯಣ್ಣ ನವರ ಜನನ ದೇಶಕ್ಕೆ ಗಣರಾಜ್ಯೋತ್ಸವ ಬಂದ ದಿನವೇ ಮಾಹಾನ ನಾಯಕನ ಮರಣ ದಿನ.ವೀರ ಕೆಚ್ಚೆದೆಯ ನಾಯಕನ ಪಾಠವನ್ನು ಮಕ್ಕಳಿಗೆ ಬೋಧನೆ ಮಾಡದೆ ಪಠ್ಯಕ್ರಮದಿಂದ ತೆಗೆಯುವುದು ಸರಿಯಲ್ಲ ಎಂದು ಹೇಳಿದರು. ಇಂಥ ನಾಯಕರು ಪಾಠವನ್ನು ಪಠ್ಯಕ್ರಮದಿಂದ ತೆಗೆಯುವುದು ಇದು ಯಾವ ನ್ಯಾಯ. ಪಠ್ಯಕ್ರಮದಿಂದ ಅಧ್ಯಾಯಗಳನ್ನು ತೆಗೆಯುವುದನ್ನು ಕೈಬಿಡಬೇಕು ಇಲ್ಲವಾದರೆ ಶೈಕ್ಷಣಿಕ ತಾಲೂಕು ಕಚೇರಿಗಳಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಲಿಂಗರಾಜ ಮಾಸ್ಟರ್ ತಿಳಿಸಿದರು.

LEAVE A REPLY

Please enter your comment!
Please enter your name here