ಪಡುಬಿದ್ರಿ ಕಡಲ್ಕೊರೆತ, ಪ್ರಾಣಾಪಾಯದಿಂದ ಸಚಿವ ಪಾರು !

0

ಉಡುಪಿ: ಪಡುಬಿದ್ರಿ ಕಡಲ್ಕೊರೆತ ವೀಕ್ಷಿಸಲು ಹೋಗಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಅಲೆಗಳ ಅಬ್ಬರಕ್ಕೆ ಬೆದರಿ ದೇಹದ ಮೇಲೆ ಅರೆಕ್ಷಣ ನಿಯಂತ್ರಣ ಕಳೆದುಕೊಂಡ ಘಟನೆ ಮಂಗಳವಾರ ಸಂಭವಿಸಿತ್ತು.

ಜಿಲ್ಲಾ ಪ್ರವಾಸದಲ್ಲಿರುವ ಗೃಹ ಸಚಿವರು ಪಡುಬಿದ್ರಿ ಕಡಲ್ಕೊರೆತ ಪ್ರದೇಶದಲ್ಲಿ ಸಮುದ್ರಕ್ಕಿಳಿದಿದ್ದರು. ಕಡಲ್ಕೊರೆತ ವೀಕ್ಷಣೆ ಮಾಡುತ್ತ ಸಮುದ್ರ ನೀರಿನ ಬಳಿ ಸಾಗಿದ ಸಚಿವರು ಅಲೆಗಳ ಅಬ್ಬರ ಕಂಡು ಒಂದು ಕ್ಷಣ ಹೆದರಿ ಹಿಂದಕ್ಕೆ ಸರಿದಾಗ ದೇಹದ ಮೇಲೆ ನಿಯಂತ್ರಣ ಕಳೆದುಕೊಂಡರು. ಜತೆಗಿದ್ದವರು ಹಿಡಿದ ಕಾರಣ ಸಚಿವರು ಅಪಾಯದಿಂದ ಪಾರಾದರು.

 

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ಮಳೆ ಹಾನಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಿದ್ದೇನೆ. ರಾಜ್ಯದಲ್ಲಿ ಕಡಲ್ಕೊರೆತ ಸಹಿತ ಪ್ರಕೃತಿ ವಿಕೋಪಕ್ಕೆ ಸ್ಪಂದಿಸಲು ಎನ್​ಡಿಆರ್​ಎಫ್​ ಮತ್ತು ಅಗ್ನಿಶಾಮಕ ದಳದ ನಾಲ್ಕು ತಂಡ ಕಾರ್ಯನಿರ್ವಹಿಸುತ್ತಿದೆ ಎಂದರು. ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್​ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here