ಪತಿಯ ಮರಣದ ಬೆನ್ನಲ್ಲೇ ಜೀವ ಬಿಟ್ಟ ಪತ್ನಿ; ಸಾವಿನಲ್ಲೂ ಒಂದಾದ ವೃದ್ಧ ದಂಪತಿ

0

ವೃದ್ಧ ದಂಪತಿ ಒಂದೇ ದಿನ ಸಾವನ್ನಪ್ಪಿದ ಮನಕಲಕುವ ಘಟನೆ ಕುಂದಗೋಳ ಪಟ್ಟಣದ ಕುಂಬಾರಗಲ್ಲಿಯಲ್ಲಿ ನಡೆದಿದೆ.

ಇಂದು ಬೆಳಗ್ಗೆ 6.30ರ ಹೊತ್ತಿಗೆ ಫೆರಿದ್ದೀನ್​ ಇಮಾಮ್​ಸಾಬ್​ ಪಠಾಣ್​(74) ಎಂಬುವರು ಹೃದಯಾಘಾತದಿಂದ ಮೃತಪಟ್ಟಿದ್ದರು. ಕುಟುಂಬಸ್ಥರು, ಸಂಬಂಧಿಕರೆಲ್ಲ ಸೇರಿ ಅವರ ಅಂತ್ಯ ಸಂಸ್ಕಾರವನ್ನು ಮುಗಿಸಿ ಮನೆಗೆ ವಾಪಸ್​ ಬರುವಷ್ಟರಲ್ಲಿ ಪತ್ನಿ ಹುಸೇನಬಿ ಫೆರುದ್ದೀನ್​ ಪಠಾಣ್​ (70) ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಪತಿಯ ಸಾವಿನ ನಂತರ ತೀವ್ರ ದುಃಖಿತರಾಗಿದ್ದ ಹುಸೇನಬಿ, ಅದೇ ನೋವಿನಲ್ಲೇ ಕೊರಗಿ, ಪತಿಯನ್ನು ಹಿಂಬಾಲಿಸಿದ್ದಾರೆ.

ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ..ತಂದೆ-ತಾಯಿಯನ್ನು ಒಂದೇದಿನ ಕಳೆದುಕೊಂಡ ಮಕ್ಕಳ, ಕುಟುಂಬದವರ ರೋದನ ಮುಗಿಲುಮುಟ್ಟಿದೆ. (ದಿಗ್ವಿಜಯ ನ್ಯೂಸ್​)

LEAVE A REPLY

Please enter your comment!
Please enter your name here