ಮುಂಬೈನ 28 ವರ್ಷದ ವ್ಯಕ್ತಿ ಪತ್ನಿ ಬಳಿ ತನಗೆ ಕೊರೊನಾ ಎಂದು ಹೇಳಿ ನಾಪತ್ತೆಯಾಗಿದ್ದ, ಬಳಿಕ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದಿದ್ದಾನೆ.
ಜುಲೈ ತಿಂಗಳಲ್ಲಿ ಪತ್ನಿ ಹತ್ತಿರ ತನಗೆ ಕೊರೊನಾ ಇದೆ ಎಂದು ಹೇಳಿ ಹೋದವನು ಗರ್ಲ್ ಫ್ರೆಂಡ್ ಜತೆ ಸಿಕ್ಕಿಬಿದ್ದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಜುಲೈ 24 ರಂದು ಪತ್ನಿಗೆ ಕರೆ ಮಾಡಿ, ನನಗೆ ಕೊರೊನಾ ಇದೆ ಎಂದು ವರದಿ ಬಂದಿದೆ.ನಾನಿನ್ನು ಬದುಕಿರುವುದಿಲ್ಲ ಎಂದು ಹೇಳಿದ್ದ, ಪತ್ನಿ ಮತ್ತೊಂದು ಪ್ರಶ್ನೆ ಕೇಳುವ ಮೊದಲೇ ಕಾಲ್ ಕಟ್ ಮಾಡಿದ್ದ. ಆಕೆ ತನ್ನ ಅಣ್ಣನ ಬಳಿ ಸಹಾಯ ಕೇಳಿದ್ದಳು.
ಬಳಿಕ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಬಳಿಕ ಆತನ ಬೈಕ್, ಹೆಲ್ಮೆಟ್, ಬ್ಯಾಗ್, ಕೀ ರಸ್ತೆಯೊಂದರಲ್ಲಿ ಪತ್ತೆಯಾಗಿತ್ತು. ಆದರೆ ಪೊಲೀಸರಿಗೆ ಈ ಕುರಿತು ಯಾವುದೇ ಮಾಹಿತಿ ಇರಲಿಲ್ಲ.
ಎಸಿಪಿ ವಿನಾಯಕ್ ಪ್ರಕರಣದ ತನಿಖೆ ಆರಂಭಿಸಿದ್ದರು. ಸೆಕ್ಯುರಿಟಿ ಕ್ಯಾಮರಾ ಫೂಟೇಜ್‌ಗಳನ್ನು ನೋಡಿದ್ದರು, ಮೊಬೈಲ್ ಲೊಕೇಷನ್ ಟ್ರೇಸ್ ಮಾಡಲು ಪ್ರಯತ್ನ ಪಟ್ಟಿದ್ದರು.