ಪತ್ರಕರ್ತ ಸಂಕಲಕರಿಯ ಶರತ್ ಶೆಟ್ಟಿ ಶ್ರೀನಿವಾಸ್ ಭಟ್ ಪ್ರಶಸ್ತಿಗೆ ಆಯ್ಕೆ

0

ಬೆಳ್ಮಣ್: ಪತ್ರಕರ್ತ, ನಾಟಕ ಕಲಾವಿದ ಸಂಕಲಕರಿಯ ಶರತ್ ಶೆಟ್ಟಿ ಯಕ್ಷಲಹರಿ ಸ್ಥಾಪಕಾಧ್ಯಕ್ಷ ದಿ. ಇ. ಶ್ರೀನಿವಾಸ್ ಭಟ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ವಿಜಯ ಕಲಾವಿದರು ಕಿನ್ನಿಗೋಳಿ ತಂಡದ ಸಂಚಾಲಕರಾಗಿರುವ ಇವರು ರಾಜ್ಯ ಮಾತ್ರವಲ್ಲದೆ ದೇಶದ ವಿವಿಧೆಡೆ ನಾಟಕ ಪ್ರದರ್ಶನ ಮಾಡಿ ಜನ ಮೆಚ್ಚುಗೆ ಪಡೆದಿರುತ್ತಾರೆ. ಸಂಘ ಸಂಸ್ಥೆಗಳಲ್ಲಿ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರೀಯವಾಗಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಇವರು ಹತ್ತಾರು ಪ್ರಶಸ್ತಿಗಳಿಗೆ ಭಾಜನರಾಗಿರುತ್ತಾರೆ.

ಕಲಾವಿದರಿಗೆ ಪ್ರತಿವರ್ಷ ಕೊಡಲ್ಪಡುವ “ಶ್ರೀನಿವಾಸ್ ಭಟ್ ಪ್ರಶಸ್ತಿ”ಗೆ ಈ ವರ್ಷ ಶರತ್ ಶೆಟ್ಟಿ ಆಯ್ಕೆಗೊಂಡಿದ್ದು, ಆ 3ರಂದು ಸಾಯಂಕಾಲ 4ಗಂಟೆಗೆ ಮೂಡಬಿದ್ರೆಯ ಧನಲಕ್ಷ್ಮೀ ನಿವಾಸದ ವೇದಿಕೆಯಲ್ಲಿ ಪ್ರಶ‌ಸ್ತಿ ಸ್ವೀಕರಿಸಲಿದ್ದಾರೆ.

ವರದಿ: ಹರೀಶ್ ಸಚ್ಚೆರಿಪೇಟೆ

LEAVE A REPLY

Please enter your comment!
Please enter your name here