ಪಪಂ ಸದಸ್ಯ ನೇತೃತ್ವದಲ್ಲಿ ಸಾವ೯ಜನಿಕರಿಂದ ರಸ್ತೆಯಲ್ಲಿ ಸಸಿ ನೆಟ್ಟು ಪ್ರತಿಭಟನೆ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ,ಪಪಂ ಸದಸ್ಯರೋವ೯ರ ನೇತೃತ್ವದಲ್ಲಿ ರಸ್ಥೆಗಳಲ್ಲಿ ಸಸಿಗಳನ್ನು ನೆಡುವ ಮೂಲಕ ದಿಡೀರ್ ಪ್ರತಿಭಟಿಸಲಾಯಿತು

0

ಪಪಂ ಸದಸ್ಯ ನೇತೃತ್ವದಲ್ಲಿ ಸಾವ೯ಜನಿಕರಿಂದ ರಸ್ತೆಯಲ್ಲಿ ಸಸಿ ನೆಟ್ಟು ಪ್ರತಿಭಟನೆ<->ಬಳ್ಳಾರಿ ಜಿಲ್ಲೆ ಕೂಡ್ಲಿಗಿ

ಪಟ್ಟಣದಲ್ಲಿ,ಪಪಂ ಸದಸ್ಯರೋವ೯ರ ನೇತೃತ್ವದಲ್ಲಿ ರಸ್ಥೆಗಳಲ್ಲಿ ಸಸಿಗಳನ್ನು ನೆಡುವ ಮೂಲಕ ದಿಡೀರ್

ಪ್ರತಿಭಟಿಸಲಾಯಿತು.ಈ ಸಂದಭ೯ದಲ್ಲಿ ಪಪಂ ಸದಸ್ಯ ಬಿ.ಎಂ.ತ್ರಿಮೂತಿ೯ ಮಾತನಾಡಿದ್ದಾರೆ,ಪಟ್ಟಣದ

ಬಹುತೇಕ ವಾಡ್೯ಗಳಲ್ಲಿನ ಸಿಸಿ ರಸ್ಥೆಗಳು ಮೊಳಗಾತ್ರದ ಗುಂಡಿಗಳನ್ನು ಹೊಂದಿದ್ದು. ಪಾದಾಚಾರಿಗಳು

ನಡೆದಾಡುವುದಕ್ಕೂ ಸಕ್೯ಸ್ ಮಾಡಬೇಕಿದೆ.ದ್ವಿಚಕ್ರ ಸವಾರರು ರಸ್ಥೆಯ ಗುಂಡಿಗಳಲ್ಲಿ ಬಿದ್ದು ಗಂಭೀರ

ಗಾಯಗಳಾಗಿರುವ ಸಾಕಷ್ಟು ನಿದಶ೯ನಗಳಿವೆ.ಪಟ್ಟಣದ ಒಂದನೇ ವಾಡ್೯ ಸೇರಿದಂತೆ ಎಲ್ಲಾ

ವಾಡ್೯ಗಳಲ್ಲಿಯೂ ಅಸಂಖ್ಯಾತ ಗುಂಡಿಗಳಿವೆ, ಪ್ರತಿಯೊಂದು ರಸ್ಥೆಗಳ ಬಹುಭಾಗಗಳು ಕೆಸರುಗದ್ದೆಗಳಾಗಿವೆ.ಈ

ಸಂಬಂದಿಸಿದಂತೆ ಪಪಂ ಮುಖ್ಯಾಧಿಕಾರಿಗಳ ಗಮನಕ್ಕೆ ಹಲವು ಬಾರಿ ತರಲಾಗಿದೆ, ಆದರೂ ಯಾವುದೇ

ಪ್ರಯೋಜವಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.ಮುಖ್ಯಾಧಿಕಾರಿಗಳು ಸಾವ೯ಜನಿಕರ ಪಾಲಿಗೆ

ಬೆದರುಗೊಂಬೆಯಂತೆ,ಜನಪ್ರತಿನಿಧಿಗಳಿಗೆ ಶೋಕೇಸಿನ ಗೊಂಬೆಯಂತಿದ್ದಾರೆ,ಅವರನ್ನು ಎಚ್ಚರಿಸಲು

ಅನಿವಾಯ೯ವಾಗಿ ತಾವು ದಿಢೀರ್ ವಿನೂತನ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಸದಸ್ಯ

ಬಿ.ಎಮ್.ತ್ರಿಮೂರ್ತಿ ತಿಳಿಸಿದ್ದಾರೆ.ರಸ್ಥೆಯ ಕೆಸರುಗದ್ದೆಯಲ್ಲಿ ಸಸಿ ನೆಡೋ ಪ್ರತಿಭಟನೆಯಲ್ಲಿ,ಬಿಜೆಪಿ ಯುವ

ಮುಖಂಡ ಬಾಣದ ಶಿವಮೂತಿ೯,ಒಂದನೇ ವಾಡ್೯ನ ನಾಗರೀಕರು ಸೇರಿದಂತೆ ಪಟ್ಟಣದ ವಿವಿದ ವಾಡ್೯ಗಳ

ನಾಗರೀಕರು ಭಾಗಿಯಾಗಿದ್ದರು.✍️ ವಂದೇ ಮಾತರ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-

LEAVE A REPLY

Please enter your comment!
Please enter your name here