ಪಶ್ಚಿಮ ಪದವೀಧರ ಕ್ಷೇತ್ರ ಕೃಷಿ ವಿ.ವಿ.ಮತ ಎಣಿಕೆ

0

*ಪಶ್ಚಿಮ ಪದವೀಧರ ಕ್ಷೇತ್ರ
ಕೃಷಿ ವಿ.ವಿ.ಮತ ಎಣಿಕೆ*
ಕೇಂದ್ರಕ್ಕೆ ಪ್ರಾದೇಶಿಕ ಆಯುಕ್ತರ ಭೇಟಿ

ಧಾರವಾಡ ( ಕರ್ನಾಟಕ ವಾರ್ತೆ) ಸೆ.30:

ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಕೇಂದ್ರಕ್ಕೆ ಚುನಾವಣಾಧಿಕಾರಿಯೂ ಆಗಿರುವ ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್ ಭೇಟಿ ನೀಡಿ ಮತಪೆಟ್ಟಿಗೆಗಳ ಭದ್ರತಾ ಕೊಠಡಿ, ಎಣಿಕೆ ಕೊಠಡಿ, ಅಭ್ಯರ್ಥಿಗಳು , ಏಜೆಂಟರುಗಳ ಪ್ರವೇಶ , ಕೊವಿಡ್ ತಪಾಸಣೆ ಕೊಠಡಿ, ಮಾಧ್ಯಮ ಕೊಠಡಿಗಳ ಸ್ಥಾಪನೆಗೆ ಸ್ಥಳ ಪರಿಶೀಲಿಸಿದರು.

ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ, ವಾಕರಸಾಸಂ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಭಾಜಪೇಯಿ,ಮಹಾನಗರಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ,ಅಪರ ಪ್ರಾದೇಶಿಕ ಆಯುಕ್ತರಾದ ರಮೇಶ್ ಕಳಸದ,ನಜ್ಮಾ ಪೀರಜಾದೆ,ಉಪವಿಭಾಗಾಧಿಕಾರಿ ಡಾ.ಬಿ.ಗೋಪಾಲಕೃಷ್ಣ, ಡಿವೈಎಸ್ ಪಿ ರವಿ ನಾಯಕ, ಸಹಾಯಕ ಪೊಲೀಸ್ ಆಯುಕ್ತೆ ಅನುಷಾ, ಲೋಕೋಪಯೋಗಿ ಇಲಾಖೆ ಎಇಇ ವಿ
.ಎನ್.ಪಾಟೀಲ, ಗದಗಕರ್,ತಹಸೀಲ್ದಾರರಾದ ಡಾ.ಸಂತೋಷ ಬಿರಾದಾರ, ಶಶಿಧರ ಮಾಡ್ಯಾಳ, ಪ್ರವೀಣ ಹುಚ್ಚಣ್ಣವರ, ಹೆಚ್.ಎನ್.ಬಡಿಗೇರ,ಪೊಲೀಸ್ ಇನ್ಸ್ ಪೆಕ್ಟರ್ ಪ್ರಮೋದ ಯಲಿಗಾರ ಮತ್ತಿತರರು ಇದ್ದರು.

 

LEAVE A REPLY

Please enter your comment!
Please enter your name here