“ಪಾಕಿಸ್ತಾನದೊಂದಿಗೆ ಸಹಜ ಸಂಬಂಧಕ್ಕೆ ಭಾರತ ಆಶಿಸುತ್ತದೆ ಆದರೆ….”

0

ಪಾಕಿಸ್ತಾನದೊಂದಿಗೆ ಸಹಜ ಸ್ನೇಹಯುತ ಸಂಬಂಧ ಬೆಸೆಯುವುದು ಭಾರತದ ಇಚ್ಛೆಯಾಗಿದೆ, ಯಾವುದೇ ವಿಷಯಗಳ ಬಗ್ಗೆ ಶಾಂತಿಯುತ ವಾತಾವರಣ, ಭಯೋತ್ಪಾದಕ, ಹಗೆತನ ಮತ್ತು ಹಿಂಸೆ ಮುಕ್ತ ವಾತಾವರಣದಲ್ಲಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಭಾರತ ಹೇಳಿದೆ.

ಇದೇ ವೇಳೆ ರಾಜ್ಯಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ವಿ ಮುರಳೀಧರನ್ ಮಾತನಾಡಿ, ಮಾತುಕತೆಗೆ ಉತ್ತಮವಾದ ವಾತಾವರಣ ಕಲ್ಪಿಸುವ ಹೊಣೆಗಾರಿಕೆ ಪಾಕಿಸ್ತಾನದ ಮೇಲೆಯೇ ಇದೆ.

ತನ್ನ ನೆಲವನ್ನು ಭಾರತದ ವಿರುದ್ಧ ಭಯೋತ್ಪಾದನೆಗೆ ಉಪಯೋಗಿಸದಂತೆ ಕಠಿಣ ಕ್ರಮ ಕೈಗೊಳ್ಳುವುದೂ ಸೇರಿದಂತೆ ವಿಶ್ವಾಸ ಮೂಡಿಸುವ ಕೆಲಸಗಳನ್ನು ಪಾಕ್ ಮಾಡಬೇಕಿದೆ ಎಂದು ವಿ ಮುರಳೀಧರನ್ ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಪಾಕಿಸ್ತಾನದೆಡೆಗೆ ಭಾರತದ ನೀತಿಯ ಕುರಿತ ಪ್ರಶ್ನೆಗೆ ಸಚಿವರು ಉತ್ತರಿಸುತ್ತಿದ್ದರು.

LEAVE A REPLY

Please enter your comment!
Please enter your name here