ಪಾರ್ಲಿಮೆಂಟ್ ನೊಳಗೆ ಅಶ್ಲೀಲ ಚಿತ್ರ ವೀಕ್ಷಿಸುತ್ತಿದ್ದಾಗಲೇ ಸಿಕ್ಕಿಬಿದ್ದ ಥಾಯ್ ಸಂಸದ!

0

ಪಾರ್ಲಿಮೆಂಟ್ ಅಧಿವೇಶನದ ವೇಳೆಯಲ್ಲಿಯೇ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿದ್ದ ಸಂಸದ ಪೇಚಿಗೆ ಸಿಲುಕಿದ ಘಟನೆ ಥಾಯ್ ಲ್ಯಾಂಡ್ ಸಂಸತ್ ನಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.

ಬಜೆಟ್ ಮಂಡನೆ ವೇಳೆ ಪಾರ್ಲಿಮೆಂಟ್ ಸದಸ್ಯ ರೊನ್ನಾಥೆಪ್ ಅನ್ವಾಟ್ ತನ್ನ ಮೊಬೈಲ್ ಫೋನ್ ನಲ್ಲಿ ಅಶ್ಲೀಲ ಚಿತ್ರಗಳನ್ನು ನೋಡುವುದರಲ್ಲಿಯೇ ತಲ್ಲೀನರಾಗಿರುವುದು ಸುದ್ದಿಗಾರರ ಕ್ಯಾಮರಾದಲ್ಲಿ ಸೆರೆಯಾಗಿರುವುದಾಗಿ ವರದಿ ವಿವರಿಸಿದೆ.

ಈ ವ್ಯಕ್ತಿ ಥಾಯ್ ಲ್ಯಾಂಡ್ ಸಂಸತ್ ನಲ್ಲಿ ಸುಮಾರು 10 ನಿಮಿಷಗಳ ಕಾಲ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಆಡಳಿತಾರೂಢ ಮಿಲಿಟರಿ ಪಾಲಾಂಗ್ ಪಕ್ಷದ ಪ್ರತಿನಿಧಿಯಾಗಿರುವ ರೊನ್ನಾಥೆಪ್ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಎಂದು ವರದಿ ತಿಳಿಸಿದೆ.

ಕೆಲವು ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವಾಗ ಅನ್ವಾಟ್ ಮುಖಕ್ಕೆ ಹಾಕಿಕೊಂಡಿದ್ದ ಮಾಸ್ಕ್ ಅನ್ನು ಕೂಡಾ ತೆಗೆದಿರುವುದು ಕೆಲವು ದೃಶ್ಯದಲ್ಲಿ ಸೆರೆಯಾಗಿದೆ. ಮೆಟ್ರೋ ನ್ಯೂಸ್ ಪ್ರಕಾರ, ಈ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ತಾನು ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿರುವುದನ್ನು ಒಪ್ಪಿಕೊಂಡಿರುವುದಾಗಿ ವರದಿ ತಿಳಿಸಿದೆ.

ಈ ಬಗ್ಗೆ ಅನ್ವಾಟ್ ಅವರಿಂದ ವಿವರಣೆ ಕೇಳಬೇಕೆಂದು ಸರ್ಕಾರದ ಅಧಿಕಾರಿಗಳು ಒತ್ತಾಯಿಸಿದ್ದರು. ಆದರೆ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದು ತಿಳಿಸಿದ್ದರು. ಸಂಸತ್ ಸ್ಪೀಕರ್ ಚುವಾನ್ ಲೀಕ್ ಪಾಯಿ, ಇದೊಂದು ವೈಯಕ್ತಿಕ ವಿಚಾರ. ಅಲ್ಲದೇ ಈ ಬಗ್ಗೆ ಇತರ ಯಾವುದೇ ಸದಸ್ಯರು ದೂರು ಕೂಡ ನೀಡಿಲ್ಲ. ಹೀಗಾಗಿ ಅನ್ವಾಟ್ ವಿರುದ್ಧ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here