ಪಿಎನ್ ಬಿ ಹಗರಣ: ನೀರವ್ ಮೋದಿ ಪ್ರಕರಣದ ವರದಿ ಭಾಗಶಃ ನಿರ್ಬಂಧದ ಅರ್ಜಿ ತಿರಸ್ಕೃತ

0

ಲಂಡನ್: ಪಿಎನ್ ಬಿ ಹಗರಣದ ಪ್ರಮುಖ ಆರೋಪಿಯಾಗಿರುವ ನೀರವ್ ಮೋದಿ ಪ್ರಕರಣದ ವಿಚಾರಣೆಯ ವರದಿಗೆ ಭಾಗಶಃ ನಿರ್ಬಂಧ ವಿಧಿಸುವ ಅರ್ಜಿಯನ್ನು ಬ್ರಿಟನ್ ನ ನ್ಯಾಯಾಲಯ ತಿರಸ್ಕರಿಸಿದೆ.

ಸೆ.07 ರಂದು 5 ದಿನಗಳ ವಿಚಾರಣೆ ಪ್ರಾರಂಭವಾಗಿದ್ದು, ಇದರ ವಿಚಾರಣೆಯನ್ನು ಭಾಗಶಃ ನಿರ್ಬಂಧಿಸುವುದಕ್ಕೆ ಅರ್ಜಿ ಸಲ್ಲಿಸಲಾಗಿತ್ತು.

ಜಿಲ್ಲಾ ನ್ಯಾಯಾಧೀಶರಾದ ಸ್ಯಾಮ್ಯುಯಲ್ ಗೂಜ್ ಅರ್ಜಿಯನ್ನು ತಿರಸ್ಕರಿಸಿದ್ದು ಇದು ಭಾರತದಲ್ಲಿನ ಹೈ ಪ್ರೊಫೈಲ್ ಕೇಸ್ ಎಂದು ಹೇಳಿದ್ದಾರೆ.

ಭಾರತ ಸರ್ಕಾರ ನೀರವ್‌ ಮೋದಿಯನ್ನು ಮತ್ತೆ ಭಾರತಕ್ಕೆ ಹಸ್ತಾಂತರಿಸುವ ಕುರಿತು ಬ್ರಿಟನ್‌ ಸರಕಾರಕ್ಕೆ ಮನವಿ ಮಾಡಿದ್ದು ಈ ಕುರಿತು ಲಂಡನ್‌ ‘ವೆಸ್ಟ್‌ಮಿನಿಸ್ಟರ್‌ ಮ್ಯಾಜಿಸ್ಟ್ರೇಟ್ಸ್‌ ನ್ಯಾಯಾಲಯದಲ್ಲಿ ಮತ್ತೆ ವಿಚಾರಣೆ ಆರಂಭವಾಗಿದೆ.

ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆದೆ. ನೀರವ್ ಮೋದಿ ಕೂಡ ವೀಡಿಯೋ ಲಿಂಕ್‌ ಮೂಲಕ ವಿಚಾರಣೆಗೆ ಹಾಜರಾಗಿದ್ದಾರೆ.

LEAVE A REPLY

Please enter your comment!
Please enter your name here