ಪೀರನವಾಡಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣನ ಮೂರ್ತಿ ತೆರೆವೊ ಗೊಳಸಿದ ಖಂಡಿಸಿ ಕೊಲ್ಹಾರ ತೆಹಶೀಲ್ದಾರಗೆ ಮನವಿ

0

ಆಂಕರ್ : ಬೆಳಗಾವಿ ಜಿಲ್ಲೆಯ ಪೀರನವಾಡಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣನ ಮೂರ್ತಿ ಮರು ಪ್ರತಿಷ್ಠಾಪನೆ ಮಾಡಬೇಕೆಂದು ಸಂಗೊಳ್ಳಿ ರಾಯಣ್ಣ ಯುವ ಸೇನೆ ಮುಖಂಡರು ಮೆರವಣಿಗೆ ಮುಖಾಂತರ ಕೊಲ್ಹಾರ ತೆಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು..
ನಂತರ ಮಾತನಾಡಿದ ಸದಾನಂದ್ ಮಹಾರಾಜರು ಕಿತ್ತೋರ ಸಂಸ್ಥಾನದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ವೀರ ಮರಣವನ್ನು ಹೊಂದಿರುವ ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣನ ಪುತ್ಥಳಿಯನ್ನು ಬೆಳೆಗಾವಿಯ ಪೀರನವಾಡಿ ಗ್ರಾಮದಲ್ಲಿ ಬೆಳೆಗಾವಿ ಜಿಲ್ಲಾಡಳಿತ ದಿನಾಂಕ 15-08-20 ರಂದು ಸಂಗೊಳ್ಳಿ ರಾಯಣ್ಣನವರ ಜನ್ಮ ದಿನದಂದೇ ರಾಯಣ್ಣನ ಪುತ್ಥಳಿಯನ್ನು ರಾಷ್ಟ್ರಧ್ವಜ ಸಹಿತ ತೆರೆವುಗೊಳಸಿದ್ದು ಖಂಡನಾರ್ಹ ಹಾಗೂ ಪ್ರತಿಭಟನೆ ಮಾಡಿದ ರಾಯಣ್ಣನ ಅಭಿಮಾನಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ ಮಾಡಿದ್ದು ಅಮಾನುಷ ಕೃತ್ಯವಾಗಿರುತ್ತದೆ.ತಕ್ಷಣ ಸಂಗೊಳ್ಳಿ ರಾಯಣ್ಣನ ಮೂರ್ತಿ ಮರು ಪ್ರತಿಷ್ಠಾಪನೆ ಮಾಡಿ ತಪ್ಪಿಸ್ಥರ ವಿರೋದ್ದ ಕ್ರಮ ತೆಗೆದೊಕೊಳ್ಳ ಬೇಕೆಂದು ಆಗ್ರಹಿಸಿದರು…

ವರದಿ : ಬಂದೇನವಾಜ್…

 

LEAVE A REPLY

Please enter your comment!
Please enter your name here