ಸಿಂದಗಿ: ಪುರಸಭೆ ಕಾರ್ಯಾಲಯ ಹಾಗೂ ಕೆಎಎಂಎಸ್ ಅಧಿಕಾರಿ ಅಭಿಷೇಕ ಪಾಂಡೆ ಚಿತ್ರ.
ಸಿಂದಗಿ; ಪುರಸಭೆಯ ವಿವಿಧ ಯೋಜನೆಗಳಡಿಯಲ್ಲಿ ೨೦೧೭ ಹಾಗೂ ೨೦೧೮ರಲ್ಲಿ ೭ ಜನ ಸೇರಿ ಒಟ್ಟು ರೂ ೪೧ ಲಕ್ಷ ಹಣವನ್ನು ಯಾವುದೇ ಕಾಮಗಾರಿ ಕೈಕೊಳ್ಳದೇ ದುರುಪಯೋಗ ಪಡಿಸಿಕೊಂಡು ಅಪರಾಧವೆಸಗಿದ್ದಾರೆ ಎಂದು ಸೆ.೨೫ರಂದು ಸಿಂದಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ ಘಟನೆ ಬೆಳಕಿಗೆ ಬಂದಿದೆ.
ಈ ಕುರಿತು ಹಾಲಿ ಮುಖ್ಯಾಧಿಕಾರಿ ಸುರೇಶ ನಾಯಕ ಅವರು, ಚೇತನ ಶರಣಗೌಡ ಪಾಟೀಲ ಗುತ್ತಿಗೆದಾರ ಸಾ. ಯಂಕಂಚಿ, ಎಸ್.ಎನ್.ಬಿರಾದಾರ ಗುತ್ತಿಗೆದಾರ ಸಾ. ಬನ್ನೆಟ್ಟಿ, ಮೃತ ಪುರಸಭೆ ಮುಖ್ಯಾಧಿಕಾರಿ ರಮೇಶ ಇಮ್ಮನದ, ಮೃತ ಕಿರಿಯ ಅಭಿಯಂತರ ಹಣಮಂತ ಬಸಗೊಂಡ, ಕಿರಿಯ ಅಭಿಯಂಣತರ ಎಸ್.ಸಿ.ಸೋಂಪೂರ, ಲೇಖಪಾಲಕಿ ಎ.ಎಂ.ಗಂಗನಹಳ್ಳಿ, ಪುರಸಭೆ ಸಿನೆಟರಿ ಅಧಿಕಾರಿ ಅಭಿಷೇಕ ಪಾಂಡೆ ಇವರೆಲ್ಲರು ಕೂಡಿಕೊಂಡು ಸಿಂದಗಿ ಪುರಸಭೆ ಕಟ್ಟಡ ಕಾಮಗಾರಿಗಳಿಗಾಗಿ ೨೬-೦೨-೨೦೧೭ರಲ್ಲಿ ಚೆಕ್ ೮೫೪೦೨೫ ನೇದ್ದರ ರೂ.೩೦ ಲಕ್ಷ ಹಣ ಯಾವುದೇ ಕಟ್ಟಡ ಕಾಮಗಾರಿ ಕೈಕೊಳ್ಳದೇ ದುರುಪಯೋಗ ಪಡಿಸಿಕೊಂಡಿದ್ದಾರೆ ಅಲ್ಲದೆ ೨೧-೦೨-೨೦೧೭ ರಂದು ಚೆಕ್ ೭೭೨೪೯೭ ನೇದ್ದರ ರೂ. ೧೧ ಲಕ್ಷ ಹಣ ಯಾವುದೇ ಅಟೋ ಹಾಗೂ ಟಿಪ್ಪರ ಖರೀದಿ ಮಾಡದೇ ದುರುಪಯೋಗ ಪಡಿಸಿಕೊಂಡಿದ್ದಾರೆ ಮತ್ತು ೨೬-೦೨-೨೦೧೮ರಲ್ಲಿ ಚೆಕ್ ೮೫೪೦೩೧ ನೇದ್ದರ ರೂ.೧೦ ಲಕ್ಷ ಸೇರಿದಂತೆ ಒಟ್ಟು ರೂ.೪೧ ಲಕ್ಷ ಹಣ ದುರುಪಯೋಗ ಮಾಡಿಕೊಂಡು ಅಪರಾಧ ಮಾಡಿದ್ದಾರೆ ಸೆ.೨೫ ರಂದು ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ ಅವರ ದೂರಿನ್ವಯ ೭ ಜನ ಮೇಲೆ ಸಿಂದಗಿ ಪೊಲೀಸ ಠಾಣೆಯಲ್ಲಿ ದೂರು ಸಲ್ಲಿಸಿದ ರನ್ವಯ ಅಪರಾಧಿಗಳ ಮೇಲೆ ಕಲಂ ೪೨೦, ೪೬೫, ರೆ/ವು ೧೪೯ ಐಪಿಸಿ ಪ್ರಕಾರ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಸಾಭೀತಾಗಿದೆ ಎಂದು ಪೊಲೀಸ ವರದಿಯಲ್ಲಿ ನಮೂದಾಗಿದೆ.
ವರದಿ: ಮಹಾಂತೇಶ ನೂಲಾನವರ, ಸಿಂದಗಿ