ಪೂಂಚ್‌ ಪ್ರದೇಶದಲ್ಲಿ ಪಾಕ್‌ನಿಂದ ಶೆಲ್‌ ದಾಳಿ

0

ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿ ಪಾಕ್‌ ಪಡೆಗಳು ಜಮ್ಮು ಮತ್ತು ಕಾಶ್ಮೀರದ ಪೂಂಚ್‌ ಜಿಲ್ಲೆಯ ಗಡಿ ನಿಯಂತ್ರ ರೇಖೆಯ ಉದ್ದಕ್ಕೂ ಶೆಲ್‌ ದಾಳಿ ನಡೆಸಿದ್ದಾರೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

ಶನಿವಾರ ಬೆಳಿಗ್ಗೆ 9.15 ಗಂಟೆಯ ಸುಮಾರಿಗೆ ಪಾಕ್‌ ಪಡೆಗಳು ಶಹಪುರ್‌, ಕಿರ್ನಿ, ದೇಗ್ವಾರ್‌ ಸೆಕ್ಟರ್‌ ಭಾಗಗಳಲ್ಲಿ ಗುಂಡಿನ ದಾಳಿ ಮತ್ತು ಶೆಲ್‌ ದಾಳಿ ಆರಂಭಿಸಿದ್ದಾರೆ. ಅದಕ್ಕೆ ಭಾರತೀಯ ಸೇನೆಯು ತಕ್ಕ ಪ್ರತ್ಯುತ್ತರ ನೀಡುತ್ತಿದೆ ಎಂದು ಅವರು ಹೇಳಿದ್ದಾರೆ.

ಇಲ್ಲಿಯವರೆಗಿನ ವರದಿ ಪ್ರಕಾರ, ಭಾರತದ ಕಡೆ ಯಾವುದೇ ಸಾವು, ನೋವು ಸಂಭವಿಸಿಲ್ಲ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here