ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಎತ್ತಿನ ಬಂಡಿಯಲ್ಲಿ ಆಗಮಿಸಿ: ಕಾಂಗ್ರೆಸ್ ನಿಂದ ವಿನೂತನ ಪ್ರತಿಭಟನೆ

0

ಪೆಟ್ರೋಲ್ ಡಿಸೆಲ್ ಬೆಲೆ ಏರಿಕೆ ಖಂಡಿಸಿ ಎತ್ತಿನ ಬಂಡಿಯಲ್ಲಿ ಆಗಮಿಸಿ: ಕಾಂಗ್ರೆಸ್ ನಿಂದ ವಿನೂತನ ಪ್ರತಿಭಟನೆ.

ಅಥಣಿ :ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ತಡೆ ವೈಪಲ್ಯ ಖಂಡಿಸಿ ಪ್ರತಿಭಟನೆ ಹಮ್ಮಿಕೊಂಡು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಥಣಿ ಹಾಗೂ ತೇಲಸಂಗ ಬ್ಲಾಕ್ ವತಿಯಿಂದ ವಿಜಯಪುರ ರಸ್ತೆಯಿಂದ ತಹಶೀಲ್ದಾರ ಕಚೇರಿವರೆಗೆ ಇಂದು ಗಜಾನನ ಮಂಗಸೂಳಿ  ಎತ್ತಿನ ಬಂಡಿಯಲ್ಲಿ ಬೈಕನೊಂದಿಗೆ ಆಗಮಿಸುವ ಮೂಲಕ  ಕಾಂಗ್ರೆಸ್ ನಿಂದ ವಿನೂತನ ಪ್ರತಿಭಟನೆ ಮಾಡಿದರು

ಈ ವೇಳೆ ಕಾಂಗ್ರೆಸ್ ಮುಖಂಡರು ಬೆಲೆ ಏರಿಕೆ ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ  ವಿರುದ್ಧ ಘೋಷಣೆ ಕೂಗಿದರು.

ಪೆಟ್ರೋಲ್‌ ಹಾಗೂ ಡೀಸೆಲ್‌ ದರ ಏರಿಕೆ ಖಂಡಿಸಿ ಅಥಣಿ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಮಾತನಾಡುತ್ತ ಸತತ 17 ದಿನಗಳಿಂದ ಪೆಟ್ರೋಲ್‌ ಹಾಗೂ ಡೀಸೆಲ್‌ ದರ ಏರಿಕೆಯಾಗುತ್ತಲೇ ಇದ್ದು, ಕೆಲವೇ ಕೆಲವು ತೈಲ ಕಂಪನಿಗಳ ಹಿತದೃಷ್ಟಿಯಿಂದ ಕಳೆದೊಂದು ತಿಂಗಳಿನಿಂದ ಪ್ರತಿ ದಿನವೂ ತೈಲ ಬೆಲೆ ಏರಿಸುತ್ತಿದ್ದು , ಕೇಂದ್ರ ಸರಕಾರ ಬಡವರ ಹಾಗೂ ಮಧ್ಯಮ ವರ್ಗದವರ ಮೇಲೆ ಬರೆ ಎಳೆಯುತ್ತಿದೆ.ಕಚ್ಚಾ ತೈಲಬೆಲೆ ಕಡಿಮೆಯಿದ್ದರೂ ಲಾಭದ ಪ್ರಯೋಜನ ಗ್ರಾಹಕರಿಗೆ,

ಜನತೆಗೆ,ರೈತರಿಗೆ ನೀಡುತ್ತಿಲ್ಲ.

ಪ್ರತಿಯೊಂದು ವ್ಯವಹಾರಕ್ಕೆ ಜಿಎಸ್ ಟಿ ಜಾರಿಗೆ ತಂದಂತೆ ಪೆಟ್ರೋಲ್ ಡೀಸೆಲ್ ಕೂಡಾ ಜಿ ಎಸ್ ಟಿ ವ್ಯಾಪ್ತಿಗೆ ತರಬೇಕು.ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿಗಳು ಜಾಣ ಕುರುಡತನ ಪ್ರದರ್ಶನ ಮಾಡುತ್ತಿದ್ದಾರೆ.ಕಿಂಚಿತ್ತಾದರೂ ಜನಪರ  ಕಾಳಜಿ ಇದ್ದರೆ ಕೂಡಲೆ  ಆದ್ದರಿಂದ ಜನರ ಹಿತದೃಷ್ಠಿಯಿಂದ ಕೂಡಲೇ ಪೆಟ್ರೋಲ್ ಡೀಸೆಲ್ ದರವನ್ನು ಕಡಿಮೆ ಮಾಡಬೇಕು. ರಾಷ್ಟ್ರಪತಿಗಳು ಮಧ್ಯೆ ಪ್ರವೇಶಿಸಿ ವಾಸ್ತವ ಬೆಲೆ ನಿಗದಿಪಡಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕು. ಜೊತೆಗೆ ರಾಷ್ಟ್ರಪತಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಅಥಣಿ ತಹಶೀಲ್ದಾರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಅಥಣಿ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಸಿದ್ದಾರ್ಥ ಸಿಂಗೆ, ತೇಲಸಂಗ ಬ್ಲಾಕ್ ಕಾಂಗ್ರೆಸ್‌ ಶ್ರೀ ಕಾಂತ ಪೂಜಾರಿ,  ಮುಖಂಡರಾದ ಧರೆಪ್ಪ ಠಕ್ಕಣ್ಣವರ,ಬಸವರಾಜ ಬುಟಾಳಿ, ನೇಮಣ್ಣ ಪಾಟೀಲ, ಸದಾಶಿವ ಬೂಟಾಳಿ,ಸಂಗಮೇಶ ಅಲಿಬಾದಿ,ರಾವಸಾಬ ಐಹೊಳೆ,

ಚಿದಾನಂದ ಮುಕಣಿ, ಸುಜಾತಾ ಸನದಿ,ಸುನಿತಾ ಐಹೊಳೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವರದಿ: ಡಾ.ಆರ್ ಎಸ್‌ ದೊಡ್ಡನಿಂಗಪ್ಪಗೋಳ  ಸಾಚಿ ಟಿವಿ ಅಥಣಿ

ವಿಡಿಯೋ
1) ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿರುವದು.

2)ಗಜಾನನ ಮಂಗಸೂಳಿ ನೇತೃತ್ವದಲ್ಲಿ ಎತ್ತಿನಬಂಡಿಯಲ್ಲಿ ತಹಶೀಲ್ದಾರ ಕಛೇರಿಗೆ ಆಗಮಿಸಿದರು.

3)ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಮಾತನಾಡಿದರು.

4)ತಹಶಿಲ್ದಾರರಿಗೆ ಮನವಿ ಸಲ್ಲಿಸಿದರು ‌

Video

 

LEAVE A REPLY

Please enter your comment!
Please enter your name here