ಪೊಲೀಸರ ಮೇಲೆ ನಂಬಿಕೆಯಿಲ್ಲ, ತನಿಖೆ ಸಿಬಿಐಗೆ ವಹಿಸಿ: ಪಾಲ್ಗರ್​​ನಲ್ಲಿ ಹತ್ಯೆಯಾದ ಸಾಧುವಿನ ತಾಯಿಯ ಆಗ್ರಹ

0

ಮಹಾರಾಷ್ಟ್ರದ ಪಾಲ್ಗರ್​ನಲ್ಲಿ ಏಪ್ರಿಲ್​ನಲ್ಲಿ ಇಬ್ಬರು ಸಾಧುಗಳು ಹಾಗೂ ಅವರ ಕಾರಿನ ಚಾಲಕನನ್ನು ಅಲ್ಲಿನ ಜನರು ಗುಂಪಾಗಿ ಹೊಡೆದು ಹತ್ಯೆ ಮಾಡಿದ್ದರು.

ಏಪ್ರಿಲ್​ 16ರಂದು ರಾತ್ರಿ ಕಲ್ಪವೃಕ್ಷಗಿರಿ ಮಹಾರಾಜ್​ (70), ಸುಶೀಲ್​ಗಿರಿ ಮಹಾರಾಜ್​ (30) ಎಂಬ ಸಾಧುಗಳು ಕಾರಿನಲ್ಲಿ ಮುಂಬೈನಿಂದ ಸೂರತ್​ಗೆ ತೆರಳುತ್ತಿದ್ದರು. ನಿಲೇಶ್​ ತೆಲ್ಗಡೆ ಕಾರಿನ ಚಾಲಕರಾಗಿದ್ದರು. ಅಂತ್ಯಸಂಸ್ಕಾರಕ್ಕೆ ಹೋಗುತ್ತಿದ್ದ ಅವರನ್ನು ಮಕ್ಕಳ ಕಳ್ಳರೆಂದು ಆರೋಪಿಸಿ ಮಹಾರಾಷ್ಟ್ರದ ಪಾಲ್ಗರ್​ ಬಳಿ ಅಲ್ಲಿನ ಸುಮಾರು 500 ಮಂದಿ ಸೇರಿ ಹೊಡೆದು, ಕೊಂದಿದ್ದರು. ಘಟನೆಗೆ ಸಂಬಂಧಪಟ್ಟಂತೆ 200ಕ್ಕೂ ಅಧಿಕ ಜನರನ್ನು ಬಂಧಿಸಲಾಗಿತ್ತು. ಕೋರ್ಟ್​​ನಲ್ಲಿ ವಿಚಾರಣೆಯೂ ನಡೆಯುತ್ತಿದೆ.
ಇದೀಗ ಈ ಸಾಧುಗಳ ಹತ್ಯೆಯ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಮೃತ ಸುಶೀಲ್​ಗಿರಿ ಮಹಾರಾಜ್​ ಅವರ ತಾಯಿ ಆಗ್ರಹಿಸಿದ್ದಾರೆ.

ಸುಮಾರು ಐದು ತಿಂಗಳು ಕಳೆದರೂ ಪ್ರಕರಣದ ತನಿಖೆ ಚುರುಕುಗೊಂಡಿಲ್ಲ. ನಟ ಸುಶಾಂತ್​ ಸಿಂಗ್​ ರಜಪೂತ್​ ಪ್ರಕರಣವನ್ನು ಸಿಬಿಐಗೆ ವಹಿಸಿದ ಹಾಗೇ, ಸಾಧುಗಳ ಹತ್ಯೆಯ ಕೇಸ್​ನ್ನು ಕೂಡ ವಹಿಸಿ. ನಮಗೆ ಮಹಾರಾಷ್ಟ್ರ ಪೊಲೀಸರ ಮೇಲೆ ನಂಬಿಕೆಯೇ ಉಳಿದಿಲ್ಲ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಘಟನೆಗೆ ಸಂಬಂಧಪಟ್ಟಂತೆ ಈಗಾಗಲೇ ಪಾಲ್ಗಾರ್​ನ 18 ಪೊಲೀಸ್​ ಸಿಬ್ಬಂದಿಯನ್ನು ದಂಡನೆಗೆ ಗುರಿ ಮಾಡಿದೆ. ಓರ್ವ ಅಧಿಕಾರಿಯನ್ನು ವಜಾ ಮಾಡಿದೆ. (ಏಜೆನ್ಸೀಸ್​)

LEAVE A REPLY

Please enter your comment!
Please enter your name here