ಪೋಲಿಸ್ ಗೆ ಭವ್ಯ ಸ್ವಾಗತ | ಕೊರೊನಾ ಸೊಂಕಿಗೆ ಒಳಗಾಗಿ ಸಂಪೂರ್ಣ ಗುಣಮುಖವಾಗಿ ಕರ್ತವ್ಯಕ್ಕೆ ಹಾಜರಾದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಮುಖ್ಯಪೇದೆ ಎಂ.ಎಸ್ ಲೋಕೇಶ್

0

ಪೋಲಿಸ್ ಗೆ ಭವ್ಯ ಸ್ವಾಗತ

ಕೊಡಗು: ಕೊರೊನಾ ಸೊಂಕಿಗೆ ಒಳಗಾಗಿ ಸಂಪೂರ್ಣ ಗುಣಮುಖವಾಗಿ ಕರ್ತವ್ಯಕ್ಕೆ ಹಾಜರಾದ ಜಿಲ್ಲಾ ಸಶಸ್ತ್ರ

ಮೀಸಲು ಪಡೆಯ ಮುಖ್ಯಪೇದೆ ಎಂ.ಎಸ್ ಲೋಕೇಶ್ ರವರಿಗೆ ಮಡಿಕೇರಿಯ ಕೇಂದ್ರ ಕಛೇರಿ ಆವರಣದಲ್ಲಿ ರೆಡ್

ಕಾರ್ಪೆಟ್ ಸ್ವಾಗತ ನೀಡಲಾಗಿದೆ. ಜಿಲ್ಲಾ ಪೋಲಿಸ್ ವತಿಯಿಂದ ಆಯೋಜಿಸಿದ್ದ ಈ ಸ್ವಾಗತ ಕಾರ್ಯಕ್ರಮದಲ್ಲಿ

ಮುಖ್ಯ ಪೇದೆ ಲೋಕೇಶ್ ಆಗಮಿಸುತ್ತಿದ್ದಂತೆ ಸಹ ಸಬ್ಬಂಧಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು ಚಪ್ಪಾಳೆ

ತಟ್ಟಿ ಸ್ವಾಗತ ಕೊರಿದರು.ಡಿಸಿಬಿ ನಿರೀಕ್ಷಕರಾದ ಐ.ಪಿ ಮೇದಪ್ಪ,ಡಿಎಆರ್ ನಿರೀಕ್ಷಕರಾದ

ಎಸ್.ರಾಚಯ್ಯ,ಡಿಸಿಆರ್ ಬಿ ನಿರೀಕ್ಷಕರಾದ ಜಯರಾಮ್ ಲೋಕೇಶ್ ರವರಿಗೆ ಹೂಗುಚ್ಚ ನೀಡಿ ಶಾಲು ಹೊದಿಸಿ

ಸನ್ಮಾನಿಸಲಾಯಿತು.ಈ ಸಂದರ್ಭ ತನ್ನ ಸಿಬ್ಬಂಧಿಗಳು ತನ್ನ ಮೇಲೆ ಗೌರವ ಪ್ರೀತಿಗೆ ಎಲ್ಲರಿಗೂ ನಮಸ್ಕರಿಸಿ

ಕೃತಜ್ಞತೆ ಸಲ್ಲಿಸಿದರು.ಈ ವೇಳೆ ಡಿಎಆರ್ ಕಂಟ್ರೋಲ್ ರೂಂ ಹಾಗು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕಚೇರಿ

ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here