ಪೋಷಕರು ನೋಡಿದ ಹುಡುಗಿ ಮದುವೆಯಾದ ಯುವಕನಿಂದ ನಡುರಸ್ತೆಯಲ್ಲೇ ಪ್ರಿಯತಮೆಗೆ ತಾಳಿ

0

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ತಿಮ್ಲಾಪುರ ಗ್ರಾಮದಲ್ಲಿ ಯುವಕನೊಬ್ಬ ಪ್ರೀತಿಸಿದ ಹುಡುಗಿಗೆ ನಡುರಸ್ತೆಯಲ್ಲೇ ತಾಳಿ ಕಟ್ಟಿದ್ದಾನೆ.

ಯುವಕ ಮತ್ತು ಯುವತಿ ಬೇರೆ ಜಾತಿಯವರಾಗಿದ್ದು ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. 4 ವರ್ಷಗಳಿಂದ ಯುವಕ-ಯುವತಿ ಪ್ರೀತಿಸಿದ್ದು, ಬೇರೆ ಜಾತಿಯವರಾಗಿದ್ದ ಕಾರಣ ಮನೆಯಲ್ಲಿ ಮದುವೆಗೆ ವಿರೋಧ ವ್ಯಕ್ತವಾಗಿದೆ.

ಯುವಕ ಪೋಷಕರು ನೋಡಿದ ಹುಡುಗಿಯನ್ನು ಎರಡು ತಿಂಗಳ ಹಿಂದೆ ಮದುವೆಯಾಗಿದ್ದಾನೆ. ಈಗ ಪ್ರೀತಿಸಿದ ಹುಡುಗಿಗೆ ನಡುರಸ್ತೆಯಲ್ಲೇ ತಾಳಿ ಕಟ್ಟಿದ್ದಾನೆ. ಇದರಿಂದ ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದ್ದು ಸ್ಥಳಕ್ಕೆ ಚನ್ನಗಿರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here