ಜೇವರ್ಗಿ: ತಾಲೂಕಿನ ಪುರಸಭೆ ಕಚೇರಿಯಲ್ಲಿ ಕಾರ್ಮಿಕರನ್ನು ನೇಮಕ ಮಾಡಬೇಕೆಂದು ದಲಿತ ಸಂಘರ್ಷ ಸಮಿತಿ ವತಿಯಿಂದ ಪುರಸಭೆ ಮುಖ್ಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಯಾದಂತೆ ಸಿದ್ದರಾಮ ಕಟ್ಟಿ ಮಾತನಾಡಿ ನಮ್ಮ ತಾಲ್ಲೂಕಿನಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಬರುವ 23 ವಾರ್ಡಗಳು ಇರುತ್ತವೆ. ವಾರ್ಡ್ ಗಳ ಸಂಖ್ಯೆ ಜಾಸ್ತಿ ಇದ್ದ ಕಾರಣ ಕಾರ್ಮಿಕರ ಕೊರತೆಯಿಂದ ಹಲವಾರು ನಾಲಿಗೆಗಳು ಸಂಪೂರ್ಣವಾಗಿ ಸುಸಚಿ ಗೊಳಿಸಲು ಆಗುತ್ತಿಲ್ಲ. ಆದಕಾರಣ ಕೂಡಲೇ 50 ಜನರನ್ನು ಪೌರ ಕಾರ್ಮಿಕರನ್ನು ನೇರ ನೇಮಕ ವಾಗಲಿ ಅಥವಾ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿ ಮಾನ್ಯ ಪುರಸಭೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದೇವೆ ಎಂದು ಹೇಳಿದರು.
ಹಾಗೂ ಪುರಸಭೆಯಲ್ಲಿ ಇಂಜಿನಿಯರ್ ಗಳ ಕೊರತೆ ಎದ್ದುಕಾಣುತ್ತಿದೆ ಸಮಸ್ಯೆ ಕೂಡ ಬಗೆಹರಿಸಬೇಕು. ಹಿರಿಯ ಆರೋಗ್ಯ ಅಧಿಕಾರಿಗಳನ್ನು ಕೂಡಲೇ ಸರ್ಕಾರ ನಮ್ಮ ಪುರಸಭೆಗೆ ನಿಯೋಜನೆ ಮಾಡಬೇಕು ಎಂದು ಸಿದ್ದರಾಮ ಕಟ್ಟಿ ಸರ್ಕಾರಕ್ಕೆ ಆಗ್ರಹಿಸಿದರು.
ಪುರಸಭೆ ಕಾರ್ಯಾಲಯದಲ್ಲಿ ವಾಹನ ಚಾಲಕರ ಸಮಸ್ಯೆಯನ್ನು ಕೂಡಲೇ ಹತ್ತು ಜನರ ವಾಹನ ಚಾಲಕರ ನೇಮಕ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಒಂದು ವೇಳೆ ನೇಮಕ ವಿಳಂಬವಾದಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಸರಕಾರಕ್ಕೆ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಕೆ.ಲಕ್ಷ್ಮೀಶ್ ನಾನು ನಿಮ್ಮ ಮನೆಗೆ ಪತ್ರವನ್ನು ಸರ್ಕಾರಕ್ಕೆ ರವಾನಿಸುತ್ತೇನೆ ಕೂಡಲೇ ಗುತ್ತಿಗೆ ಆಧಾರದ ಮೇಲೆ ಅಥವಾ ನೇರ ನೇಮಕಾತಿ ಆಧಾರದ ಮೇಲೆ ಸರ್ಕಾರ ಯಾವ ರೀತಿ ನೇಮಕ ಮಾಡಿಕೊಳ್ಳುತ್ತದೆ ಅದಕ್ಕೆ ಬದ್ಧನಾಗಿ ನಾವು ನಮ್ಮ ಪುರಸಭೆಯಲ್ಲಿ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲು ಸರ್ಕಾರಕ್ಕೆ ಮನವಿ ಪತ್ರವನ್ನು ರವಾನಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿದ್ದರಾಮ ಕಟ್ಟಿ ಬಸವರಾಜ್ ಕಟ್ಟಿ ಹಾಗೂ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.