ಪೌಷ್ಟಿಕ ಆಹಾರ ಸೇವನೆಯನ್ನು ಉತ್ತೇಜಿಸಲು ಕೈತೋಟದ ಉದ್ಘಾಟನೆ.

0

ಪೌಷ್ಟಿಕ ಆಹಾರ ಸೇವನೆಯನ್ನು ಉತ್ತೇಜಿಸಲು ಕೈತೋಟದ ಉದ್ಘಾಟನೆ.

ಪೌಷ್ಟಿಕ ಮಾಸಾಚರಣೆಯ ಅಂಗವಾಗಿ ಪ್ರತಿ ಅಂಗನವಾಡಿ ಕೇಂದ್ರಗಳಲ್ಲಿ ಎಲ್ಲಾ ರೀತಿಯ ತರಕಾರಿ ಹಾಗೂ ಹಣ್ಣಿನ ಸಸಿಗಳನ್ನೊಳಗೊಂಡ ಪೌಷ್ಟಿಕ ಕೈತೋಟವನ್ನು ನಿರ್ಮಿಸಲಾಗುತ್ತದೆ. ಅಲ್ಲಿ ಬೆಳೆದ ಸಾವಯವ ಹಣ್ಣು, ತರಕಾರಿಗಳನ್ನು ಅಂಗನವಾಡಿ ಮಕ್ಕಳಿಗೆ ನೀಡುವ ಮೂಲಕ ಆ ಮುಗ್ಧ ಮನಸ್ಸುಗಳ ಆರೋಗ್ಯ ಕಾಪಾಡಲಾಗುತ್ತದೆ.

ಈ ನಿಟ್ಟಿನಲ್ಲಿ, ನಿಪ್ಪಾಣಿ ಮತಕ್ಷೇತ್ರದ ಬೆನಾಡಿ ಗ್ರಾಮದ ಮಲ್ಲಿಕಾರ್ಜುನ ನಗರದಲ್ಲಿ ಅಂಗನವಾಡಿ ಕೇಂದ್ರದ ಹೊರವಲಯದಲ್ಲಿ ಪೋಷಣ್ ಮಾಸಾಚರಣೆಯ ಪ್ರಯುಕ್ತ ಪೌಷ್ಟಿಕ ಕೈ ತೋಟವನ್ನು ಸಸಿಗಳಿಗೆ ನೀರುಣಿಸುವ ಮೂಲಕ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಚಿವರಾದ ಸೌ. ಶಶಿಕಲಾ ಜೊಲ್ಲೆ,ಜಿ ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ, ಜಿ ಯವರು ಉದ್ಘಾಟಿಸಿ, ವೀಕ್ಷಣೆ ನಡೆಸಿದರು. ಅಲ್ಲಿನ ಅಂಗನವಾಡಿ ಕೇಂದ್ರದಲ್ಲಿ ನಡೆಯುವ ಆಗು ಹೋಗುಗಳನ್ನು ಸವಿಸ್ತಾರವಾಗಿ ತಿಳಿಯುವ ಸಲುವಾಗಿ ಪರಿವೀಕ್ಷಿಸಿ, ಅಲ್ಲಿನ ಉತ್ತಮ ವ್ಯವಸ್ಥೆ ಮತ್ತು ಕಲಿಕಾ ಕ್ರಮವನ್ನು ಶ್ಲಾಘಿಸಿದರು.

ಪೌಷ್ಟಿಕ ಮಾಸಾಚರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿರುವ ಜಿಲ್ಲೆಗಳ ಪೈಕಿ ಬೆಳಗಾವಿ ಜಿಲ್ಲೆ, ಅದರಲ್ಲಿ ನಿಪ್ಪಾಣಿ ತಾಲೂಕು ಪ್ರಥಮ ಸ್ಥಾನವನ್ನಲಂಕರಿಸಿದೆ. ಅದೇ ರೀತಿ ನಿಪ್ಪಾಣಿ ತಾಲೂಕಿನಲ್ಲಿ ಪೌಷ್ಟಿಕ ಕೈ ತೋಟಗಳ ನಿರ್ಮಾಣ ಕಾರ್ಯವು ಶೇ. 80 ರಷ್ಟು ಪೂರ್ಣಗೊಂಡಿರುವ ಕುರಿತು ಬೆಳಗಾವಿ ಜಿಲ್ಲಾ ನಿರುಪಣಾ ಅಧಿಕಾರಿಗಳಾದ ನವೀನ್ ಕುಮಾರ್ ನೀಡಿದ ವರದಿ ಸಂತಸ ತಂದಿದೆಂದು ಹೇಳಿದರು.

 

बेनाडी
पौष्टिक आहाराला प्रोत्साहन देण्यासाठी बागेची उद्घाटन.

पौष्टीक मोहिमेच्या निमित्ताने प्रत्येक अंगणवाडी केंद्रात सर्व प्रकारच्या भाज्या व फळझाडे असलेले पौष्टिक बाग तयार केली जात आहे. तेथील बागेत उत्पादन झालेल्या सेंद्रिय फळे आणि भाज्या अंगणवाडी मुलांना देण्याबाबत लहान मुलांच्या आरोग्य जपले जात आहे.

या पार्श्वभूमीवर निपाणी मतदारसंघातील बेनाडी गावातील मल्लिकार्जुन नगरातील अंगणवाडी केंद्राच्या बाहेर परिसरातील पोषण मोहिमेच्या प्रयुक्त पौष्टीक बागेतील वृक्षारोपणाला पाणी राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाचे मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांनी घालून, उद्घाटन करून पाहणी केली व तेथील अंगणवाडी केंद्रात होत असलेल्या घडामोडींचा आढावा घेऊन, तेथील उत्तम पद्धती आणि शिकवण्याचा पद्धतींचा कौतुक केले.

ज्या जिल्ह्यांमध्ये पौष्टीक मोहिमेच्या व्यवस्थापन यशस्वीरित्या पार पडले आहेत त्यापैकी बेळगावी जिल्ह्यामधील निपाणी तालुक प्रथम क्रमांक पटकावला आहे. त्याचप्रमाणे निपाणी तालुक्यात पौष्टीक बागेची निर्माण कार्य 80% पूर्ण झाल्याबाबत बेळगावी जिल्हा निरुपणा अधिकारी नवीन कुमार यांनी सादर केलेल्या अहवालामुळे खुश झाला आहे असे सांगितले.

LEAVE A REPLY

Please enter your comment!
Please enter your name here