ಜಿಲ್ಲೆಯಲ್ಲಿ ಮೂರು ವರ್ಷಗಳಿಂದ ಪ್ರಾಕೃತಿಕ ವಿಕೋಪ ಸಂಭವಿಸುತ್ತಲೇ ಇದೆ. ಕಳೆದ ವರ್ಷ ಭಾರೀ ಭೂಕುಸಿತದ ಜೊತೆಗೆ ಪ್ರವಾಹ ಎದುರಾಗಿತ್ತು. ಹೀಗಾಗಿ ಜಿಲ್ಲೆಯಲ್ಲಿ 330 ಕೋಟಿ ಮೌಲ್ಯದಷ್ಟು ನಷ್ಟವಾಗಿತ್ತು. ಇನ್ನು ಈ ಬಾರಿಯೂ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತ ಮತ್ತು ಪ್ರವಾಹದಿಂದಾಗಿ 450 ಕೋಟಿ ನಷ್ಟವಾಗಿದೆ. ಕಳೆದ ಬಾರಿ ಪ್ರಾಕೃತಿಕ ವಿಕೋಪದ ಉಂಟಾದಾಗ ಕೊಡಗಿಗೆ ಬಂದಿದ್ದ ಸಿಎಂ ಯಡಿಯೂರಪ್ಪ ಅವರು 546 ಕೋಟಿಯ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿತ್ತು. ವಿಶೇಷ ಪ್ಯಾಕೇಜ್ ಘೋಷಿಸಿ ಒಂದು ವರ್ಷ ಕಳೆದರೂ ಇದುವರೆಗೆ ಜಿಲ್ಲೆಗೆ ಬಿಡುಗಡೆಯಾಗಿದ್ದು ಮಾತ್ರ 200 ಕೋಟಿ ರೂಪಾಯಿ ಮಾತ್ರ. ಇನ್ನೂ 346 ಕೋಟಿ ಕಳೆದ ವರ್ಷದ ಅನುದಾನ ಬರಬೇಕಾಗಿದೆ.
346 ಕೋಟಿ ಅನುದಾನ ಬಾಕಿ ಇರುವುದರಿಂದ ಕಳೆದ ಬಾರಿ ಪ್ರವಾಹ ಮತ್ತು ಭೂಕುಸಿತದಲ್ಲಿ ಕೊಚ್ಚಿ ಹೋಗಿದ್ದ ಸಾಕಷ್ಟು ಗ್ರಾಮೀಣ ಭಾಗದ ರಸ್ತೆಗಳ ಕಾಮಗಾರಿ ಇನ್ನೂ ಆಗಿಲ್ಲ. ಪ್ರವಾಹದಲ್ಲಿ ಮನೆ ಕಳೆದುಕೊಂಡ ವಿರಾಜಪೇಟೆ ತಾಲ್ಲೂಕಿನ 50 ಕ್ಕೂ ಹೆಚ್ಚು ಕುಟುಂಬಗಳಿಗೆ ಇನ್ನೂ ಪರ್ಯಾಯ ಮನೆ, ಪರಿಹಾರ ಕೂಡ ದೊರೆತ್ತಿಲ್ಲ. Karnataka Reservoir Water Level: 11 ಜಿಲ್ಲೆಗಳಲ್ಲಿ ಇಂದಿನಿಂದ ಭಾರೀ ಮಳೆ; ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಹೀಗಿದೆ
ಈ ಬಾರೀ ಮತ್ತೆ ಎದುರಾದ ಪ್ರವಾಹ ಮತ್ತು ಭೂಕುಸಿತದಿಂದಾಗಿ ಹತ್ತಾರು ರಸ್ತೆಗಳು, ಸಾವಿರಾರು ಎಕರೆ ಕೃಷಿ ಭೂಮಿ, ಹತ್ತಾರು ಮನೆಗಳು ಸಂಪೂರ್ಣ ಹಾಳಾಗಿವೆ. ಹೀಗಾಗಿ 450 ಕೋಟಿಯಷ್ಟು ಜಿಲ್ಲೆಗೆ ನಷ್ಟವಾಗಿದ್ದು, ಕಳೆದ ಬಾರಿಯೇ ಪರಿಹಾರವೇ ಬಾರದಿರುವಾಗ ಈ ಬಾರಿಯ ಪರಿಹಾರ ಇನ್ನಷ್ಟು ವಿಳಂಬವಾಗುವುದಾ ಎನ್ನೋ ಅನುಮಾನವಿದೆ. ಹೀಗಾಗಿಯೇ ಉಸ್ತುವಾರಿ ಸಚಿವ ವಿ. ಸೋಮಣ್ಣ ಕೂಡ ಅನುದಾನ ನೀಡುವಂತೆ ಸಿಎಂ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ ಎನ್ನಲಾಗಿದೆ.