ಪ್ರತಿಕ್ಷಣವೂ ಪ್ರಜೆಗಳ ಆರೋಗ್ಯ ಕಾಳಜಿಯೇ ಮುಖ್ಯ!

0

ನನ್ನ ವೃತ್ತಿ ಜೀವನದುದ್ದಕ್ಕೂ ಪ್ರಜೆಗಳನ್ನೆಲ್ಲಾ ನನ್ನದೇ ಮಕ್ಕಳೆಂದು ಭಾವಿಸಿ, ಅವರ ಕಾಳಜಿ ವಹಿಸುವಲ್ಲಿ ನಿಷ್ಠಾವಂತ ಪ್ರಯತ್ನ ಮಾಡುತ್ತಲೇ ಇದ್ದೇನೆ. ಅವರಿಗಾಗಿ ನವೀನ ತಂತ್ರಜ್ಞಾನಗಳನ್ನು ಬಳಸಿ, ಅತ್ಯುತ್ತಮ ಜೀವನಶೈಲಿ ನೀಡುವ ಪಣ ತೊಟ್ಟಿದ್ದೇನೆ.

ಇದರ ಸಲುವಾಗಿ ನಿಪ್ಪಾಣಿ ನಗರಸಭೆಯಲ್ಲಿ ತಾಲೂಕು ಆಡಳಿತ, ನಗರಸಭೆ, ಪೊಲೀಸ್, ಶಿಕ್ಷಣ ಇಲಾಖೆ, ಹಾಗೂ ವೈದ್ಯಕೀಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜನರ ನಾಡಿ ಮಿಡಿತವನ್ನು ಅಳೆಯುವ ಪಲ್ಸ್ ಅಕ್ಸಿಮೀಟರ್ ಮೂಲಕ ನಾಗರೀಕ ತಪಾಸಣೆಯ ಕಾರ್ಯಕ್ರಮವನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಉದ್ಘಾಟಿಸಿ, ಪ್ರತಿ ವಾರ್ಡ್ ಗೆ ಒಂದು ಪಲ್ಸ್ ಅಕ್ಸಿಮೀಟರ್ ಗಳನ್ನು ವಿತರಿಸಿದ ನಂತರ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಪೌರಾಯುಕ್ತರಾದ ಶ್ರೀ ಮಹಾವೀರ ಬೊರಣ್ಣವರ, ವೈದ್ಯಾಧಿಕಾರಿ ಶ್ರೀಮತಿ ಸೀಮಾ ಗುಂಜ್ಯಾಳೆ, ಬಿಜೆಪಿ ನಗರ ಅಧ್ಯಕ್ಷರಾದ ಶ್ರೀ ಪ್ರಣವ ಮಾನವಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು, ಮೇಲ್ವಿಚಾರಕಿಯರು ಹಾಗೂ ನಗರಸಭೆ ಸದಸ್ಯರು ಉಪಸ್ಥಿತರಿದ್ದರು.

निपाणी
प्रतिक्षण नागरिकांच्या आरोग्याची काळजी महत्वाची!

माझ्या संपूर्ण कारकीर्दीत नागरिकांना स्वतःची मुले समजून, त्यांची काळजी घेण्यासाठी विश्वासू प्रयत्न करीतच आहे. त्यांच्यासाठी नाविन्यपूर्ण तंत्रज्ञान वापरुन, त्यांना शक्य तितकी सर्वोत्कृष्ट जीवनशैली देण्याचा प्रयत्न करीत आहे.

यासाठी निपाणी नगरसभात तालुका प्रशासन, नगरपालिका, पोलिस, शिक्षण विभाग आणि वैद्यकीय विभाग, महिला व बालकल्याण विभागाच्या संयुक्त विद्यमाने आयोजित लोकांची नाडी तपासणी पल्स ऑक्सिमीटरद्वारे नागरी तपासणी कार्यक्रम राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांनी उद्घाटन करून प्रत्येक प्रभागात एक नाडी पल्स ऑक्सिमीटर वितरण करून, कार्यक्रमास उद्देशून संबोधित केले.

यावेळी आयुक्त श्री महावीर बोरण्णवर, वैद्यकीय अधिकारी डॉ. सीमा गुंज्याळे, भाजपा शहराध्यक्ष श्री प्रणव मानवी, आशा आणि अंगणवाडी कार्यकर्ते, पर्यवेक्षका आणि नगरसभा सदस्य उपस्थित होते.

LEAVE A REPLY

Please enter your comment!
Please enter your name here